Tip Top Basheer Interrogation 25 / ಮಂಗಳೂರು : ಇಡಿ ವಿಚಾರಣೆಗೆ ಹಾಜರಾದ ಸಾಗರದ ಟಿಪ್ ಟಾಪ್ ಬಷೀರ್  

ಹಂಚಿಕೊಳ್ಳಿ
WhatsApp Facebook X Telegram
Tip Top Basheer Interrogation
Tip Top Basheer Interrogation

Tip Top Basheer Interrogation / ಇಡಿ ವಿಚಾರಣೆಗೆ ಹಾಜರಾದ ಸಾಗರದ ಟಿಪ್ ಟಾಪ್ ಬಷೀರ್  

Shivamogga news / ಸಾಗರದ ಉದ್ಯಮಿ ಹಾಗೂ ನಗರಸಭಾ ಸದಸ್ಯ ಟಿಪ್ ಟಾಪ್ ಬಷೀರ್ ಇವತ್ತು ಮಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ (ED) ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ವಿಚಾರಣೆ ಬಳಿಕ ಮಾತನಾಡಿದ ಅವರು, ಇಕ್ಬಾಲ್​ರವರ ವಿಚಾರಕ್ಕೆ ವಿಚಾರಣೆಗೆ ಕರೆದಿದ್ದರು, ಇದೀಗ ವಿಚಾರಣೆ ಮುಗಿದಿದೆ. ಮತ್ತೆ ಕರೆದಾಗ ಬರಬೇಕು ಎಂದು ಹೇಳಿದ್ದಾರೆ. ಅದಕ್ಕೆ ನಾನು ಸಹ ಸಮ್ಮತಿಸಿದ್ದೇನೆ ಎಂದರು.  

Tip Top Basheer Interrogation
Tip Top Basheer Interrogation

ಮಂಗಳೂರಿನ ಮೇರಿಹಿಲ್ ಬಳಿಯ ಇಡಿ ಕಚೇರಿಯಲ್ಲಿ ಬಷೀರ್ ಅವರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಕಳೆದ ಶುಕ್ರವಾರ, ಬಷೀರ್ ಅವರ ಕೆಳದಿ ರಸ್ತೆಯಲ್ಲಿರುವ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.  7 ಅಧಿಕಾರಿಗಳ ತಂಡ ದಾಳಿ ನಡೆಸಿ, ಸತತ 18 ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿತ್ತು. ಆನಂತರ ವಿಚಾರಣೆಗೆ ಬರುವಂತೆ  ಬಷೀರ್ ಅವರಿಗೆ ಸೂಚಿಸಿದ್ದರು. ಇದೀಗ ಸೂಚನೆಯಂತೆ ವಿಚಾರಣೆಗೆ ಹಾಜರಾಗಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : malendutoday.com

Mangaluru ED Raid,  , Shivamogga Businessman , Sagar City Councillor

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor