housing scheme reservation ಜೂನ್​ 23 2025 ವಸತಿ ಯೋಜನೆಯಲ್ಲಿ ಮೀಸಲಾತಿ | ಸಹಿ ಸಂಗ್ರಹಕ್ಕೆ ಮುಂದಾದ ರಾಷ್ಟ್ರಭಕ್ತ ಬಳಗ

housing scheme reservation ಶಿವಮೊಗ್ಗ: ರಾಜ್ಯ ಸರ್ಕಾರ ವಸತಿ ಯೋಜನೆಯಡಿ ಮುಸ್ಲಿಮರಿಗೆ ಶೇ. 15ರಷ್ಟು ಮೀಸಲಾತಿ ನೀಡಿದ್ದನ್ನು ಪ್ರಶ್ನಿಸಿ ರಾಷ್ಟ್ರ ಭಕ್ತ ಬಳಗ ಹಾಗೂ ಕ್ರಾಂತಿವೀರ ಬ್ರಿಗೇಡ್‌ಯಿಂದ  ರಾಜ್ಯದ ಜನರಿಂದ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಕಳುಹಿಸುವುತ್ತೇವೆ ಎಂದು ರಾಷ್ಟ್ರ ಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ, ಆದರೆ ಅವರ ನಡವಳಿಕೆ ಇದಕ್ಕೆ ವಿರುದ್ಧವಾಗಿದೆ. ಈ ಹಿಂದೆ ಬಜೆಟ್‌ನಲ್ಲಿ ಮುಸ್ಲಿಮರಿಗೆ 900 ಕೋಟಿ ರೂ. ಘೋಷಿಸಲಾಗಿತ್ತು. ಈ ಬಾರಿ ಅದನ್ನು ದುಪ್ಪಟ್ಟುಗೊಳಿಸಿ 1916 ಕೋಟಿ ರೂ. ಬಜೆಟ್ ಘೋಷಿಸಲಾಗಿದೆ.  ಮದರಸಾಗಳಲ್ಲಿ ಸ್ಕಾಲರ್ಶಿಪ್ ಕೊಡುತ್ತಿದ್ದಾರೆ. ಆದರೆ ಹಿಂದುಳಿದ ವರ್ಗ ಹಾಗೂ ಬಡವರಿಗೆ ಇವರ ಸರ್ಕಾರದಿಂದ ಯಾವುದೇ ಉಪಯೋಗ ಆಗುತ್ತಿಲ್ಲ. ಹಿಂದುಳಿದವರ ಹೆಸರು ಹೇಳಿಕೊಂಡು  ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಸರ್ಕಾರ ಈಗ ಹಿಂದುಳಿದವರನ್ನು ಸಂಪೂರ್ಣ ಮೂಲೆಗೆ ತಳ್ಳಿದ್ದಾರೆ ಎಂದರು.

housing scheme reservation  ದೇಶದಲ್ಲಿ ವಸತಿ ಯೋಜನೆಯಡಿ ಧರ್ಮದ ಆಧಾರದ ಮೇಲೆ ಎಲ್ಲಿಯೂ ಶೇ. 15ರಷ್ಟು ಮೀಸಲಾತಿ ನೀಡಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಮುಸ್ಲಿಮರಿಗೆ ಶೇ. 15ರಷ್ಟು ಮೀಸಲಾತಿ ನೀಡಿದೆ ಎಂದು ಹೇಳಿ, ಅದೇ ಆಧಾರದ ಮೇಲೆ ರಾಜ್ಯದಲ್ಲೂ ಮೀಸಲಾತಿ ನೀಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೇಂದ್ರದಲ್ಲಿ ಯಾವುದೇ ಧರ್ಮಾಧಾರಿತ ಮೀಸಲಾತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಧರ್ಮಾಧಾರಿತ ಮೀಸಲಾತಿ ಯಾವುದೇ ಕಾರಣಕ್ಕೂ ಜಾರಿಯಾಗುವುದಿಲ್ಲ. ಈ ಮಸೂದೆಯನ್ನು ರಾಜ್ಯಪಾಲರು ಅಂಗೀಕರಿಸದಂತೆ ಮನವಿ ಮಾಡುತ್ತೇವೆ. ಅಲ್ಲದೆ, ರಾಷ್ಟ್ರ ಭಕ್ತ ಬಳಗ ಮತ್ತು ಕ್ರಾಂತಿವೀರ ಬ್ರಿಗೇಡ್‌ ವತಿಯಿಂದ ರಾಜ್ಯ ಸರ್ಕಾರ ವಸತಿ ಯೋಜನೆಯಡಿ ಮುಸ್ಲಿಮರಿಗೆ ಶೇ. 15ರಷ್ಟು ಮೀಸಲಾತಿ ನೀಡಿದ್ದನ್ನು ಪ್ರಶ್ನಿಸಿ ರಾಜ್ಯದ ಜನರಿಂದ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಕಳುಹಿಸುವುದಾಗಿ ತಿಳಿಸಿದರು. ಇದಷ್ಟೇ ಅಲ್ಲದೆ, ಜೂನ್ 25ರಂದು ಇದರ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು ಎಂದರು.

housing scheme reservation  ಅಕ್ರಮ ಗಣಿಗಾರಿಕೆ ವಿಚಾರ : ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಬೇಕು

ಸಜ್ಜನ ರಾಜಕಾರಣಿ ಎಚ್.ಕೆ. ಪಾಟೀಲ್ ಅವರು ಗಣಿಗಾರಿಕೆಯಲ್ಲಿ ಒಂದೂವರೆ ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದ್ದು, ಈ ಕುರಿತು ಸಿದ್ದರಾಮಯ್ಯ ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಆದರೆ, ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮೌನ ವಹಿಸಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಅವರ ಪತ್ರಕ್ಕೆ ನೀವು ಮೌನವಾಗಿದ್ದೀರಿ ಎಂದರೆ ಕಳ್ಳ ಕಳ್ಳತನವನ್ನು ಒಪ್ಪಿಕೊಂಡಂತೆ ಎಂದರ್ಥ. ಹಾಗಾಗಿ, ಈ ಒಂದೂವರೆ ಲಕ್ಷ ಕೋಟಿ ರೂ. ನಷ್ಟಕ್ಕೆ ನಾನೇ ಕಾರಣ ಎಂದು ರಾಜ್ಯದ ಜನರ ಮುಂದೆ ನೀವು ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

Leave a Comment