ajith Hanumakkanavar 20-06-25 ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಅಜಿತ್​ ಹನುಮಕ್ಕನವರ್​ | ಯಾವಾಗ

ಹಂಚಿಕೊಳ್ಳಿ
WhatsApp Facebook X Telegram
ajith Hanumakkanavar
ajith Hanumakkanavar

ajith Hanumakkanavar ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಅಜಿತ್​ ಹನುಮಕ್ಕನವರ್​ | ಯಾವಾಗ, ಕಾರಣವೇನು

ಜೂನ್​ 22 ರಂದು  ಸಂಜೆ 5:30 ಕ್ಕೆ ಕುವೆಂಪು ರಂಗಮಂದಿರದಲ್ಲಿ ತುಂಗಾ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಲ್ಯೂಟ್ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಸುದ್ದಿ ಮಾಧ್ಯಮದ ನಿರೂಪಕರಾದ ಅಜಿಕ್​ ಹನುಮಕ್ಕನವರ್​ ಆಗಮಿಸಲಿದ್ದಾರೆ ಎಂದು ಬಳ್ಳೇಕೆರೆ ಸಂತೋಷ್​ ಹೇಳಿದರು.

ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಆಪರೇಷನ್​ ಸಿಂಧೂರ್​ ವೀರರಿಗೆ ನಮಿಸುವ ದೃಷ್ಟಿಯಿಂದ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಕರ್ತವ್ಯದ ವೇಳೆ ಸಾವನ್ನಪ್ಪಿದ ಪೊಲೀಸರಿಗೆ ಹಾಗೂ ಪೆಹಲ್ಗಾಮ್ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಶ್ರದ್ಧಾಂಜಲಿ ಸಲ್ಲಿಸಲಿದ್ದೇವೆ ಎಂದರು.

ajith Hanumakkanavar ಈ ಕಾರ್ಯಕ್ರಮದ ಉದ್ಘಾಟನೆಯನ್ನ ಸಂಸದ ರಾಘವೇಂದ್ರ ನೆರವೇರಿಸಲಿದ್ದು, ದಿಕ್ಸೂಚಿ ಭಾಷಣವನ್ನ ಸುದ್ದಿಮಾಧ್ಯಮದ ನಿರೂಪಕರಾದ ಅಜಿತ್ ಹನುಮಕ್ಕನವರ್ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ  ಎಸ್ ಎನ್ ಸಂಗಮೇಶ್, ಶಾಸಕ ಬಿ.ಕೆ.ಸಂಗಮೇಶ್ವರ್, ಐಜಿಪಿ ರವಿಕಾಂತೇಗೌಡ, ಎಸ್ಪಿ ಮಿಥುನ್ ಕುಮಾರ್, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು. 

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor