soraba Tree Falls on Canter : ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಉಳವಿ ಸಮೀಪದ ಕರ್ಜಿಕೊಪ್ಪ ಬಳಿ ಕ್ಯಾಂಟರ್ ವಾಹನದ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಮೇಶ್, ಹನುಮಂತಪ್ಪ, ವೀರಪ್ಪ ಎಂಬ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಇವತ್ತು ಬೆಳಗ್ಗೆ ಗೊಬ್ಬರ ಅನ್ಲೋಡ್ ಮಾಡುವ ಸಲುವಾಗಿ ಹಿರೇಕರೂರಿನಿಂದ ಕರ್ಜಿಕೊಪ್ಪದ ಕಡೆಗೆ ಬರುತ್ತಿದ್ದ ವೇಳೆ ರಸ್ತೆಪಕ್ಕದ ಬೃಹತ್ ಮರವೊಂದು ಕ್ಯಾಂಟರ್ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ಕ್ಯಾಂಟರ್ನಲ್ಲಿದ್ದ ಚಾಲಕ ರಮೇಶ್ ಹಾಗೂ ಹನುಮಂತಪ್ಪ ಮತ್ತು ವೀರಪ್ಪ ಎಂಬವರಿಗೆ ಗಾಯಗಳಾಗಿವೆ. ಅವರಿಗೆ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಒದಗಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ.


soraba Tree Falls on Canter
ಘಟನೆ ಬಗ್ಗೆ ಮಾತನಾಡಿರುವ ಕ್ಯಾಂಟರ್ನಲ್ಲಿದ್ದ ಜಯಪ್ಪ ಎಂಬವರು ಮರ ಬೀಳುವ ಸಂದರ್ಭದಲ್ಲಿ ಚಾಲಕ ರಮೇಶ್ ಬ್ರೆಕ್ ಒತ್ತಿದರಾದರೂ ಸಹ, ವಾಹನ ನಿಲ್ಲಲಿಲ್ಲ. ಹೀಗಾಗಿ ಮರವು ಕ್ಯಾಂಟರ್ನ ಮುಂದಿನ ಭಾಗದ ಮೇಲೆಯೇ ಬಿದ್ದಿತು. ಪರಿಣಾಮ ಮೂವರು ಗಾಯಗೊಂಡರು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇನ್ನೂ ಈ ಬಗ್ಗೆ ಮಾತಾಡಿರುವ ವಲಯ ಅರಣ್ಯಾಧಿಕಾರಿ ಚಾವುದ್ ಭಾಷಾ ಅಂಗಡಿಯವರು, ತೀವ್ರ ಮಳೆಯಿಂದಾಗಿ ಹಸಿಮರಗಳ ಬುಡಗಳು ಸಡಿಲಗೊಂಡು ನೆಲಕ್ಕೆ ಉರುಳುತ್ತಿವೆ. ಘಟನೆಯಲ್ಲಿ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ನೆರವು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.ಅಲ್ಲದೆ ಈ ರೀತಿಯಲ್ಲಿ ಮರಗಳು ಬೀಳುವ ಸ್ಥಿತಿಯ ಬಗ್ಗೆ ತಿಳಿದ ಪಕ್ಷದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ, ಅಂತಹ ಮರಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಮಳೆಯ ಮನ್ಸೂಚನೆ ಮತ್ತು ಶಿವಮೊಗ್ಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ ಮಾಡಿ https://malenadutoday.com/category/shivamogga/
ಸೊರಬ ತಾಲ್ಲೂಕುನ ಬಗ್ಗೆ ತಿಳಿಯಲು ಇಲ್ಲಿನೋಡಿ
soraba Tree Falls on Canter

Soraba: Tree Falls on Canter, Two Seriously Injured
Soraba, June 18, 2025: Two people were seriously injured when a large tree fell on a canter vehicle near Karjikoppa, close to Ulavi in Soraba Taluk. The injured individuals received first aid at the Ulavi Primary Health Center and have been transported to Sagar for further treatment.
soraba Tree Falls on Canter