shivamogga fast news 17 / ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು!? / 3 ತಾಲ್ಲೂಕಿನ 4 ಸುದ್ದಿ!

ಹಂಚಿಕೊಳ್ಳಿ
WhatsApp Facebook X Telegram
shivamogga fast news 17 
shivamogga fast news 17 

shivamogga fast news 17  1. ಭದ್ರಾವತಿ ಗ್ರಾಮಾಂತರ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಸವಾರ ಸಾವು

ಭದ್ರಾವತಿ: ಜೂನ್ 15, 2025 ರ ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆಯಲ್ಲಿ ಬೈಕ್ ಸವಾರರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಘಟನೆ ಬೆನ್ನಲ್ಲೆ 112 ತುರ್ತು ಸೇವಾ ಸಂಖ್ಯೆಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದರು. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ERV ಸಿಬ್ಬಂದಿಗಳು ಮೃತ ವ್ಯಕ್ತಿಯ ವಿವರಗಳನ್ನು ಪರಿಶೀಲಿಸಿ, ಹೆಚ್ಚಿನ ತನಿಖೆಗಾಗಿ ಠಾಣೆಗೆ ಮಾಹಿತಿ ರವಾನಿಸಿದರು. 

2. ಸಾಗರಪೇಟೆ: ಅಪಪ್ರಚಾರ ಆರೋಪ, ದೂರು ನೀಡಲು ಸೂಚನೆ shivamogga fast news 17 

ಸಾಗರ ಟೌನ್​ :  ತಮ್ಮೂರಿನ ವ್ಯಕ್ತಿಯೊಬ್ಬರು ತನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಗರಪೇಟೆ ಠಾಣಾ ವ್ಯಾಪ್ತಿಯ ದೂರುದಾರರೊಬ್ಬರು  112ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ತಲುಪಿದ ERV ಸಿಬ್ಬಂದಿಗಳು, ಆರೋಪಿತ ವ್ಯಕ್ತಿಗೆ ಸೂಕ್ತ ಎಚ್ಚರಿಕೆ ಹಾಗೂ ತಿಳುವಳಿಕೆ ನೀಡಿದ್ದಾರೆ. ಅಲ್ಲದೆ, ದೂರುದಾರರಿಗೆ ಔಪಚಾರಿಕ ದೂರು ದಾಖಲಿಸಲು ನೇರವಾಗಿ ಠಾಣೆಗೆ ಬರುವಂತೆ ಸೂಚಿಸಿ ಪ್ರಕರಣ ಇತ್ಯರ್ಥ ಪಡಿಸಿದರು

3. ಶಿವಮೊಗ್ಗದಲ್ಲಿ ಮಾಂಗಲ್ಯ ಸರ ಕಳವು: ಕುಂಬಾರಗುಂಡಿಯಲ್ಲಿ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಚಿನ್ನ ಮಾಯ!

ಶಿವಮೊಗ್ಗ:  ಬಿ.ಬಿ. ರಸ್ತೆ ನಿವಾಸಿ ಪುಷ್ಪಲತಾ ಎಂಬವರು  ಗಾಂಧಿ ಬಜಾರ್‌ನಲ್ಲಿರುವ ತಮ್ಮ ಸಹೋದರನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಯೊಬ್ಬ ಅವರ ಕೊರಳಿಗೆ ಕೈ ಹಾಕಿ ಚಿನ್ನದ ಸರ  ಕಳುವು ಮಾಡಿದ್ದಾರೆ. ಕುಂಬಾರಗುಂಡಿಯ ಘಟನೆ ನಡೆದಿದೆ.  1.15 ಲಕ್ಷ ರೂ. ಮೌಲ್ಯದ, 12.800 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾನೆ. ಈ ಸಂಬಂಧ  ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ.

4. ಶಿವಮೊಗ್ಗ: ಸೆಕ್ಯೂರಿಟಿ ಗಾರ್ಡ್ ಮೇಲೆ ಬೀದಿ ನಾಯಿ ದಾಳಿ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ! shivamogga fast news 17 

ಶಿವಮೊಗ್ಗ: ಸವಳಂಗ ರಸ್ತೆಯಲ್ಲಿರುವ ಜೆಜೆ ಕಾಂಪ್ಲೆಕ್ಸ್‌ನ ಬಳಿ  ಸೆಕ್ಯೂರಿಟಿ ಗಾರ್ಡ್ ರಮೇಶ್ ಅವರ ಮೇಲೆ ಬೀದಿ ನಾಯಿಯು ದಾಳಿ ನಡೆಸಿದೆ. ಬೀದಿಯಲ್ಲಿ ಬೊಗಳುತ್ತಿದ್ದ ನಾಯಿಗಳ ಗುಂಪಿನ ಪೈಕಿ ಒಂದು ನಾಯಿಯು ಮಲಗಿದ್ದ ಸೆಕ್ಯುರಿಟಿ ಗಾರ್ಡ್ ಮೇಲೆ ಅಟ್ಯಾಕ್ ಮಾಡಿದೆ. ಘಟನೆಯಲ್ಲಿ  ರಮೇಶ್ ಅವರ ಹೊಟ್ಟೆ, ಬಲಗಾಲಿನ ತೊಡೆ ಮತ್ತು ಬಲಗೈ ತೋರು ಬೆರಳಿಗೆ ಗಂಭೀರ ಗಾಯಗಳಾಗಿವೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor