viral news : ಗುಟ್ಕಾ ತಂದ ಎಡವಟ್ಟು, ವ್ಯಕ್ತಿ ಸ್ಥಳದಲ್ಲೇ ಸಾವು | ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ವ್ಯಕ್ತಿಯೋರ್ವ ಗುಟ್ಕಾ ಉಗುಳಲು ಕಾರ್ನ ಬಾಗಿಲು ತೆರದ ವೇಳೆ ಭೀಕರ ಅಪಘಾತ ಸಂಭವಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಿಲಾಸ್ಪುರ್ನಲ್ಲಿ ನಡೆದಿದೆ. ಆ ಭಯಾನಕ ಅಪಘಾತದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#BREAKING | छत्तीसगढ़ के बिलासपुर में भीषण सड़क हादसा , गुटका थूकने के लिए गेट खोलने पर डिवाइडर से टकराई कार
@romanaisarkhan | https://t.co/smwhXUROiK#breakingnews #Chhattisgarh #Bilaspur #CarAccident #RoadAccident pic.twitter.com/OHAnKBdmGZ
— ABP News (@ABPNews) June 5, 2025
viral news ವರದಿಗಳ ಪ್ರಕಾರ ಬಿಲಾಸ್ಪುರ ಹೊರವಲಯದಲ್ಲಿ ಮೂವರು ವ್ಯಕ್ತಿಗಳು ಇನ್ನೋವ ಕಾರಿನಲ್ಲಿ ಸರಿ ಸುಮಾರು 100 ಕಿಲೋಮೀಟರ್ ಸ್ಪೀಡ್ನಲ್ಲಿ ಬರುತ್ತಿದ್ದರು. ಆ ವೇಳೆ ಕಾರಿನಲ್ಲಿದ್ದ ರಾಕಿ ಎಂಬ ವ್ಯಕ್ತಿ ಗುಟ್ಕಾ ಉಗುಳಲು ಕಾರಿನ ಬಾಗಿಲು ತೆರೆದಿದ್ದಾನೆ. ಆಗ ಕಾರು ಸ್ಪೀಡ್ ಇದ್ದ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಇದರಿಂದಾಗಿ ರಾಕಿ ಸೇರಿದಂತೆ ಇನ್ನಿಬ್ಬರು ಯುವಕರು ಹೊರ ಎಸೆಯಲ್ಪಟ್ಟಿದ್ದಾರೆ. ಇದರ ಪರಿಣಾಮ ರಾಕಿ ಎಂಬಾತನಿಗೆ ತೀವ್ರಗಾಯಗಳಾಗಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.