SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 22, 2024
ಸೂಡಾ ಸೈಟ್ ಮನೆ ಕಟ್ಟದಿದ್ದರೇ ರದ್ದು ಖಚಿತ
ಖಾಲಿ ಇರುವ 2300 ನಿವೇಶನಗಳಲ್ಲಿ ಮನೆ ಕಟ್ಟದಿದ್ದಲ್ಲಿ ಅವುಗಳ ರದ್ದತಿ ಖಚಿತ ಎಂದು ಸೂಡಾ ಅಧ್ಯಕ್ಷ ಹೆಚ್ಎಸ್ ಸುಂದರೇಶ್ ಹೇಳಿದ್ದಾರೆ. ಊರಗಡೂರಿನಲ್ಲಿ 60 ಎಕರೆಯಲ್ಲಿ ಬಡಾವಣೆ ನಿರ್ಮಿಸಲಾಗುತ್ತಿದ್ದು 672 ನಿದೇಶನ ನಿರ್ಮಿಸಲಾಗುವುದು. ರೈತರಿಗೆ ನೀಡುವ ನಿವೇಶನ ಹೊರತುಪಡಿಸಿ ಉಳಿದ 431 ನಿವೇಶನಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಿದ್ದು 2 ರಿಂದ 3 ತಿಂಗಳ ಒಳಗೆ ಹಂಚಿಕೆ ಮಾಡಲಾಗುವುದು ಎಂದರು.
ರೈತರು ಖಾಸಗಿಯವರಿಗೆ ತಮ್ಮ ಜಮೀನನ್ನು ಮಾರುವ ಬದಲು ಕಾನೂನುಬದ್ದವಾಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಎಂದ ಅವರು, ಸೋಗಾನೆ, ಹೊಳೆಹೊನ್ನೂರು, ಭದ್ರಾವತಿ ಭಾಗದಲ್ಲಿ ಜಮೀನು ಮಾರಾಟ ಮಾಡುವ ವರು ಇದ್ದರೆ 50:50 ಆಧಾರದಲ್ಲಿ ಪ್ರಾಧಿಕಾರಕ್ಕೆ ಮಾರಾಟ ಮಾಡಬಹುದು ಎಂದು ತಿಳಿಸಿದರು.
ಇದೇ ವೇಳೆ ಪರಿಸರದಲ್ಲಿ ಸಮತೋಲನ ಕಾಪಾಡಲು ನಾವೆಲ್ಲ ಸಸಿಗಳನ್ನು ನೆಟ್ಟು ಪೋಷಿಸಬೇಕು. ನಗರದ ಹಸರೀಕರಣ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸೂಡಾ ವತಿಯಿಂದ ವಿವಿಧ ಬಡಾವಣೆಗಳಲ್ಲಿ ಸುಮಾರು 5 ರಿಂದ 6 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು ಎಂದ ಅವರು, ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಇಂದು ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಏರ್ಪಡಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿದರು

ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ