ಅಪರಾಧಿಗಳ ಚಿನ್ನದಗಣಿಗಳಿಗೆ ಗಡಿಪಾರಿನ ಶಿಕ್ಷೆ | ಪೊಲೀಸ್‌ ಇಲಾಖೆ ಮುಟ್ಟಿದವರಿಗೆ ಶಾಕ್‌ | ಮೊದಲೇ ಹೇಳಿತ್ತು ಮಲೆನಾಡು ಟುಡೆ

Shivamogga police action gadiparu , ಶಿವಮೊಗ್ಗ ಪೊಲೀಸ್‌ ಇಲಾಖೆ ಅಕ್ರಮಗಳಿಗೆ ಫೈನಾನ್ಸ್‌ ಮಾಡುತ್ತಾ, ಪೊಲೀಸ್‌ ಇಲಾಖೆಯೊಂದಿಗೆ ಚೆಲ್ಲಾಟವಾಡುತ್ತಿದ್ದವರನ್ನ ಗಡಿಪಾರಿಗೆ ಗುರಿಪಡಿಸುತ್ತಿದೆ.

ಅಪರಾಧಿಗಳ ಚಿನ್ನದಗಣಿಗಳಿಗೆ ಗಡಿಪಾರಿನ ಶಿಕ್ಷೆ | ಪೊಲೀಸ್‌ ಇಲಾಖೆ ಮುಟ್ಟಿದವರಿಗೆ ಶಾಕ್‌ | ಮೊದಲೇ ಹೇಳಿತ್ತು ಮಲೆನಾಡು ಟುಡೆ
Shivamogga police action , ಶಿವಮೊಗ್ಗ ಪೊಲೀಸ್‌ , ಅಕ್ರಮ , ಮಲೆನಾಡು ಟುಡೆ

SHIVAMOGGA | MALENADUTODAY NEWS 

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 16, 2024  

ಮಲೆನಾಡು ಟುಡೆ ಶಿವಮೊಗ್ಗದ ಕಾಣದ ಕೈಗಳ ಕುರಿತಾಗಿ ಈ ಹಿಂದೆನೆ ವಿಸ್ಕೃತ ವರದಿಯನ್ನ ಪ್ರಕಟಿಸಿತ್ತು. ಕೊಲೆ, ಗಲಭೆ, ಅಕ್ರಮ ಚಟುವಟಿಕೆ, ಗ್ಯಾಂಗ್ ವಾರ್‌, ಕೋಮು ಸೂಕ್ಷ್ಮ ಪ್ರಕರಣಗಳಲ್ಲಿ ಆರೋಪಿಗಳಿಗೆ ದುಬಾರಿ ಬೇಲ್‌ ಸಲೀಸಾಗಿ ಹೇಗೆ ಸಿಗುತ್ತದೆ? ಶಿವಮೊಗ್ಗದ ಅಕ್ರಮ ದಂಧೆಕೋರರು ಶಿವಮೊಗ್ಗದ ಶಾಂತಿ ಹಾಳುಮಾಡುವ ಪ್ರಯತ್ನ ನಡೆಸ್ತಿರುವುದಷ್ಟೆ ಅಲ್ಲದೆ ಕಾನೂನಿನ ಅಧಿಕೃತ ವ್ಯವಸ್ಥೆಯನ್ನು ಹೇಗೆ ಅಲುಗಾಡಿಸುತ್ತಿದೆ? ಇದರ ಪರಿಣಾಮ ಮುಂದೇನು? ಎಂಬ ಗುರುತ ಪ್ರಶ್ನೆಗಳಿಗೆ ಉತ್ತರಿಸುವ ವರದಿ ಅದಾಗಿತ್ತು. 

ಆ ಸಂದರ್ಭದಲ್ಲಿ ಒತ್ತಡಗಳ ನಡುವೆಯು ಮಲೆನಾಡು ಟುಡೆಯ ವರದಿ ಬಹುಮುಖ್ಯವಾಗಿ ಪೊಲೀಸ್‌ ಇಲಾಖೆಯ ಆಯಕಟ್ಟಿನ ಅಧಿಕಾರಿಗಳನ್ನ ಎಚ್ಚರಿಸಿತ್ತು. ಇದೀಗ ಆ ವರದಿ ಸತ್ಯತೆ ನಿಜಜಗತ್ತಿಗೂ ಕಾಣಲು ಸಿಕ್ಕಿದೆ. ಹೌದು, ತೆರೆಮೆರೆಯಲ್ಲಿಯೇ ನಿಂತು ತಳಮಟ್ಟದ ಪೊಲೀಸ್‌ ಇಲಾಖೆಯ ನಿಷ್ಣಾತ ಸಿಬ್ಬಂದಿಗಳನ್ನ ಒಕ್ಕಲೆಬ್ಬಿಸುವ ಹುನ್ನಾರವೊಂದು ನಡೆದಿದ್ದಿದೆ. ಈ ಬಗ್ಗೆಯು ಮಲೆನಾಡು ಟುಡೆ ಬಹಳ ಹಿಂದೆಯೇ ವರದಿ ಮಾಡಿತ್ತು. ಕಾಣದ ಕೈಗಳಿಂದ ಲಾಭ ತೆಗೆದುಕೊಂಡ ವ್ಯಕ್ತಿಗಳು ತಮ್ಮ ಬುದ್ದಿಗೆ ಕೆಲಸಕೊಟ್ಟು ಗೆದ್ದು ಬಿಟ್ಟೆವು ಎಂದುಕೊಂಡಿದ್ದವು. ಅದಕ್ಕೆ ಸಾಕ್ಷಿ ಎಂಬಂತೆ ಪೊಲೀಸ್‌ ಇಲಾಖೆಯನ್ನ ಲೋಕಾಯುಕ್ತದ ಮೂಲಕ ಟ್ರ್ಯಾಪ್‌ ಮಾಡಿಸುವ ಹುನ್ನಾರವೊಂದು ಸಕ್ಸಸ್‌ ಕಂಡಿತ್ತು.

ಹಬ್ಬಗಳ ಸಂದರ್ಭದ ಸೂಕ್ಷ್ಮತೆಯನ್ನು ಕೆರಳಿಸುವ ಶಿವಮೊಗ್ಗ ಸೋಕಾಲ್ಡ್‌ ದಂಧೆಕೋರರ ಬಗ್ಗೆ ಇದೀಗ ಶಿವಮೊಗ್ಗ ಪೊಲೀಸ್‌ ಇಲಾಖೆ ಎಚ್ಚೆತ್ತಿದೆ. ಅಷ್ಟೆಅಲ್ಲ, ಡಿಪಾರ್ಟ್ಮೆಂಟ್‌ನ್ನೆ ತಮ್ಮ ಜಾಡಿಗೆ ತಕ್ಕಂತೆ ನಡೆಸಿಕೊಳ್ಳಲು ಹೊರಟಿದ್ದ ಕುಕೃತ್ಯದ ಬಗ್ಗೆ ಪೊಲೀಸ್‌ ಇಲಾಖೆ ಜಾಗೃತವಾಗಿದೆ. ಹೌದು, ಶಿವಮೊಗ್ಗದಲ್ಲಿ ಈ ಹಿಂದೆ ನಡೆದಿದ್ದ ಲೋಕಾಯುಕ್ತ ರೇಡ್‌ ವೊಂದು ಶಿವಮೊಗ್ಗ ಪೊಲೀಸರ ನೈತಿಕ ಸ್ಥೈರ್ಯವನ್ನ ಕುಗ್ಗಿಸಿತ್ತು. ಆದರೆ ಅದೇ ಘಟನೆ ಇದೀಗ ಡಿಪಾರ್ಟ್ಮೆಂಟ್‌ನ್ನ ಇನ್ನಷ್ಟು ಸ್ಟ್ರಾಂಗ್‌ ಮಾಡಿದೆ. 

ಶಿವಮೊಗ್ಗದ ಸೆನ್‌ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಟ್ರ್ಯಾಪ್‌ ಆಗಿದ್ದರು. ಈ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಆದರೆ ಇತ್ತ ಪೊಲೀಸ್‌ ಇಲಾಖೆಗೆ  ಇಂತಹದ್ದೊಂದು ಘಟನೆಗೆ ಕಾರಣ ಯಾರಿದ್ದರು? ಅಸಲಿಗೆ ನಡೆದಿದ್ದು ಏನು ಎಂಬುದು ಗೊತ್ತಾಗಿ ಹೋಗಿದೆ. ಅದರ ಪರಿಣಾಮವಾಗಿಯೇ ಪೊಲೀಸ್‌ ಇಲಾಖೆ ಅಕ್ರಮ ದಂಧೆಕೋರರ ವಿರುದ್ಧ ಮಹತ್ವದ ಹೆಜ್ಜೆ ಇಟ್ಟಿದೆ. 

ಅಕ್ರಮ ದಂಧೇಕೋರರಿಗೆ ಗಡಿಪಾರಿನ ಶಿಕ್ಷೆ 

ಯಾವಾಗ ಪೊಲೀಸ್‌ ಇಲಾಖೆಯ ಒಳಗೆ ಅಕ್ರಮ ದಂಧೆಕೋರರು ಕೈ ಆಡಿಸ್ತಿದ್ದಾರೆ ಎಂಬ ವಿಚಾರ ಗೊತ್ತಾಯ್ತೋ ? ಇಲಾಖೆಯ ಅಧಿಕಾರಿಗಳು ಸಿಟ್ಟಾಗಿದ್ದಾರೆ. ಅದರಲ್ಲಿಯು ಎಸ್‌ಪಿ ಮಿಥುನ್‌ ಕುಮಾರ್‌ ಈ ವಿಚಾರದಲ್ಲಿ ಪರ್ಮ್‌ ಆಂಡ್‌ ಸ್ಟ್ರಿಟ್‌ ಸ್ಟ್ಯಾಂಡ್‌ ತೆಗೆದುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ, ಏಳು ಜನ ಅಕ್ರಮ ದಂಧೆಕೋರರ ಗಡಿಪಾರಿಗೆ ಶಿಫಾರಸ್ಸು ಮಾಡಿರುವುದು. 

ಕಾನೂನು ಬಾಹಿರ ಚಟುವಟಿಕೆಗಳ ನಡೆಸ್ತಿರುವ ಅಕ್ರಮ ಕೆಲಸಗಳಿಂದ ಹಿಂದೆ ಸರಿಯಲ್ಲ ಎಂದು ಖಾತರಿಯಾದಾಗ ಅಂತವರನ್ನ ಅವರ ನೆಲೆಯಿಂದಲೇ ಗಡಿಪಾರು ಮಾಡುವುದು ಕಾನೂನಿಗೆ ಇರುವ ಪವರ್.‌ ಅದೇ ರೀತಿಯಲ್ಲಿ ಶಿವಮೊಗ್ಗ ಕುಖ್ಯಾತ ಬಿಡ್ಡರ್‌ಗಳು ಸೇರಿದಂತೆ ಏಳು ಮಂದಿಯನ್ನು ಹಾಸನ, ಬೆಳಗಾವಿ, ಬ‍‍ಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಲು ಶಿವಮೊಗ್ಗ ಉಪವಿಭಾಗಕ್ಕೆ ಮನವಿ ಮಾಡಲಾಗಿದೆ. ಅಂತಿಮವಾಗಿ ಶಿವಮೊಗ್ಗ ಎಸಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ. 

ಗಣಪತಿ ಹಬ್ಬಕ್ಕೂ ಮೊದಲೇ ಶಿವಮೊಗ್ಗದಲ್ಲಿ ಅಕ್ರಮ ಚಟುವಟಿಕೆಯಲ್ಲಿ ಸಕ್ರಿಯವಾಗಿರುವವರನ್ನ ಹಾಗೂ  ಕ್ರೈಂ ಪಂಡಿಂಗ್‌ ಮಾಫೀಯಾಕೋರರನ್ನ ಗಡಿಪಾರು ಮಾಡಲಾಗಿದೆ. ಸುಮಾರು  53 ಮಂದಿಯನ್ನ ಇತ್ತೀಚೆಗೆ ಗಡಿಪಾರು ಮಾಡಲಾಗಿತ್ತು. ಇದೀಗ ಆ ಪಟ್ಟಿಯಲ್ಲಿ ದಂಧೆಕೋರರನ್ನ ಸೇರ್ಪಡೆ ಮಾಡಿರುವುದು ಪೊಲೀಸ್‌ ಇಲಾಖೆಯ ಮೆಚ್ಚುವಂತಹ ಕೆಲಸವಾಗಿದೆ. ಶಿವಮೊಗ್ಗದ ಶಾಂತಿಗೂ ಈ ಕ್ರಮದಿಂದ ಸಹಾಯವಾಗುತ್ತದೆ. 




shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ