ಒಂದೇ ದಿನ 751 ಕೇಸ್/‌ 50,000 ದಂಡ | ಟ್ರ್ಯಾಕ್ಟರ್‌ನಲ್ಲಿ ಅಡಿಕೆ ಕದ್ದು, ಮಾಲೀಕನಿಗೆ ಜೀವ ಬೆದರಿಕೆ | ಮದುವೆ ಆಗುವಂತೆ ಆಸಿಡ್‌ ವಾರ್ನಿಂಗ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 25, 2024  

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 2.0 ಪ್ರಯುಕ್ತ ಅ.22 ರಂದು ಜಿಲ್ಲೆಯಾದ್ಯಂತ ಏಕಕಾಲದಲ್ಲಿ 32 ತಂಬಾಕು ದಾಳಿ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ  ಜಿಲ್ಲೆಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘಿಸುವವರ ವಿರುದ್ದ ದಾಳಿಯನ್ನು ಹಮ್ಮಿಕೊಂಡು ಒಟ್ಟು 751 ಪ್ರಕರಣ ದಾಖಲಿಸಿ, ರೂ.50210 ದಂಡವನ್ನು ಸಂಗ್ರಹಿಸಲಾಗಿದೆ. 

- Advertisement -

ಮದುವೆ ಆಗುವಂತೆ ಬೆದರಿಕೆ

ಮಹಿಳೆಯೊಬ್ಬರಿಗೆ ಮದುವೆಯಾಗುವಂತೆ ಒತ್ತಾಯಿಸಿ, ಹಲ್ಲೆ ಮಾಡಿ ಕಿರುಕುಳ ನೀಡಿದ್ದಷ್ಟೆ ಅಲ್ಲದೆ ಮದುವೆಯಾಗಲು ನಿರಾಕರಿಸಿದರೇ ಆಸಿಡ್‌ ಹಾಕುವುದಾಗಿ ಬೆದರಿಕೆ ಹಾಕಿದ ಪ್ರಸಂಗವೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ನಡೆದಿದೆ. ಈ ಸಂಬಂಧ ಇಲ್ಲಿನ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಸ್ವತಃ ಮಹಿಳೆಯೇ ದೂರು ನೀಡಿದ್ದು ಕೇಸ್‌ ದಾಖಲಾಗಿದೆ. 

ಟ್ರ್ಯಾಕ್ಟರ್‌ನಲ್ಲಿ ಬಂದು ಅಡಿಕೆ ಕದ್ದರು

ಹೊಳೆಹೊನ್ನೂರು ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಬರುವ ಹನುಮಂತಾಪುರದಲ್ಲಿ ಅಡಿಕೆ ತೋಟವೊಂದಕ್ಕೆ ನುಗ್ಗಿ ಅಡಕೆ ಕೊಯ್ದು ಟ್ರ್ಯಾಕ್ಟರ್‌ನಲ್ಲಿ ಕೊಂಡೊಯ್ದಿದ್ದಷ್ಟೆ ಅಲ್ಲದೆ,ಅದನ್ನ ಪ್ರಶ್ನಿಸಿದ ಅಡಕೆ ತೋಟದ ಮಾಲೀಕನಿಗೆ ಜೀವ ಬೆದರಿಕೆ ಹಾಕಿದ ಸಂಬಂಧ ಕೇಸ್‌ ದಾಖಲಾಗಿದೆ. ಈ ಕುರಿತಾಗಿ ಅಡಕೆ ಅಂದಾಜು 25 ಕ್ವಿಂಟಾಲ್‌ ಅಡಿಕೆ ಕಳ್ಳತನ ಮಾಡಿದ ಆರೋಪ ಹಾಗೂ ಒಂಬತ್ತು ಜನರು ಟ್ರ್ಯಾಕ್ಟರ್‌ ಹಾಗೂ ಬೈಕ್‌ಗಳಲ್ಲಿ ಬಂದು ಬೆದರಿಕೆ ಹಾಕಿದ ಆರೋಪಕ್ಕೆ ಸೆಕ್ಷನ್‌ಗಳ ಅಡಿಯಲ್ಲಿ FIR ದಾಖಲಾಗಿದೆ. 

SUMMARY |  Holehonnur, Holehonnur Police Station, Shivamogga Tobacco Free Youth Campaign, COPTA Act, Shivamogga Police, Bhadravathi Rural Police Station, Shivamogga Fast News, 

KEYWORDS |  Holehonnur, Holehonnur Police Station, Shivamogga Tobacco Free Youth Campaign, COPTA Act, Shivamogga Police, Bhadravathi Rural Police Station, Shivamogga Fast News, ಹೊಳೆಹೊನ್ನೂರು, ಹೊಳೆಹೊನ್ನೂರು ಪೊಲೀಸ್‌ ಠಾಣೆ, ಶಿವಮೊಗ್ಗ ತಂಬಾಕು ಮುಕ್ತ ಯುವ ಅಭಿಯಾನ, ಕೋಪ್ಟಾ ಕಾಯಿದೆ, ಶಿವಮೊಗ್ಗ ಪೊಲೀಸ್‌, ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆ, ಶಿವಮೊಗ್ಗ ಫಾಸ್ಟ್‌ ನ್ಯೂಸ್,

Share This Article
Leave a Comment

Leave a Reply

Your email address will not be published. Required fields are marked *