ಬೆಳಗ್ಗೆ ಬೆಳಗ್ಗೆ ಸ್ಟಾರ್ಟ್‌ ಆಗದ ಸಿಟಿಬಸ್‌ | ಪರಿಶೀಲಿಸಿದಾಗ ಗೊತ್ತಾಯ್ತು ರಾತ್ರಿ ನಡೆದ ಕೃತ್ಯ!

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 12, 2025 ‌‌ ‌

ಶಿವಮೊಗ್ಗ ಸಿಟಿಬಸ್‌ವೊಂದರ ಬ್ಯಾಟರಿ ಕಳ್ಳತನ ಮಾಡಿರುವ ಬಗ್ಗೆ ಶಿವಮೊಗ್ಗ ನಗರದ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ಆಗಿದೆ. 

- Advertisement -

ನಡೆದ ಘಟನೆ ವಿವರ ಹೀಗಿದೆ. ಶಿವಮೊಗ್ಗ ನಗರದಲ್ಲಿ ಓಡಾಡುವ ಶಶಿಕುಮಾರ್‌ ಬಸ್‌ನ್ನು ಅದರ ಮಾಲೀಕರು ಕಳೆದ ಮಾರ್ಚ್‌ ಒಂದರಂದು ರೂಟ್‌ ಮುಗಿಸಿ ವಿನೋಬನಗರ 100 ಫೀಟ್‌ ರೋಡ್‌, ಭಾರತ್‌ ಪೆಟ್ರೋಲ್‌ ಬಂಕ್‌ ಎದುರಿನ ರಸ್ತೆಯಲ್ಲಿ ಪಾರ್ಕ್‌ ಮಾಡಿದ್ದರು. ಮರುದಿನ ಬೆಳಗ್ಗೆ ಬಸ್‌ ಸ್ಟಾರ್ಟ್‌ ಮಾಡಲು ಹೋದಾಗ, ಅದು ಸ್ಟಾರ್ಟ್‌ ಆಗಲಿಲ್ಲ. ಹೀಗಾಗಿ ಪರಿಶೀಲಿಸಿದಾಗ ಬಸ್ ನಲ್ಲಿದ 2 ಬ್ಯಾಟರಿಗಳು ಕಳುವಾಗಿರುವುದು ಗೊತ್ತಾಗಿದೆ. 2 ಬ್ಯಾಟರಿಯ ಅಂದಾಜು ಬೆಲೆ 15,000, ಈ ಬಗ್ಗೆ ಸ್ಥಳೀಯವಾಗಿ ವಿಚಾರಿಸಿದ ಮಾಲೀಕರು ತಡವಾಗಿ ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದಾರೆ. 

Share This Article
Leave a Comment

Leave a Reply

Your email address will not be published. Required fields are marked *