ಮನೆ ಕದ ತಟ್ಟಿದ ಶಬ್ಧ ಕೇಳಿ ಹೊರಬಂದ ಮಹಿಳೆಗೆ ಶಾಕ್ | ಪೌಡರ್ ನಲ್ಲಿತ್ತೆ ಕಣ್ಕಟ್ಟು!? ಕುತೂಹಲದ ಕೇಸ್
Shivamogga vinobhanagara police station case , ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ವಿವರ ಹೀಗಿದೆ
SHIVAMOGGA | MALENADUTODAY NEWS | Sep 3, 2024 ಮಲೆನಾಡು ಟುಡೆ
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪೌಡರ್ ಗ್ಯಾಂಗ್‌ವೊಂದು ಕರಾಮತ್ತು ತೋರಿಸಿದೆ. ದೇವರು ತೊಳೆಯುವ ಪೌಡರ್ ಇದೆ ಬೇಕಾ ಎನ್ನುತ್ತಾ ಚಾಕು ತೋರಿಸಿ ಮಹಿಳೆಯೊಬ್ಬರ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ (Vinobanagar police station) THE BHARATIYA NYAYA SANHITA (BNS), 2023 (U/s-308(2),318(4)) ಅಡಿಯಲ್ಲಿ ಸುಲಿಗೆ ಹಾಗೂ ನಂಬಿಕೆದ್ರೋಹ, ಸಾಮಗ್ರಿಯನ್ನು ಕೊಡುವ ನೆಪದಲ್ಲಿ ವಂಚಿಸಿದ ಆರೋಪದ ಪ್ರಕಾರ ಕೇಸ್ ದಾಖಲಿಸಲಾಗಿದೆ.
ಏನಿದು ಘಟನೆ
ಕಳೆದ ದಿನಾಂಕ 29/08/2024 ರಂದು ನಡೆದ ಘಟನೆ ಇದಾಗಿದೆ. ಇಲ್ಲಿನ ನಿವಾಸಿ ಮಹಿಳೆಯೊಬ್ಬರು ಮನೆಯ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಯಾರೋ ಬಂದು ಮನೆಯ ಬಾಗಿಲು ಬಡಿದಿದ್ದಾರೆ. ಏನು ಎಂದು ಹೊರಗೆ ಬಂದು ವಿಚಾರಿಸಿದಾಗ, ಅವರು ದೇವರುಗಳನ್ನು ತೊಳೆಯುವ ಪೌಡರ್ ಇದೆ ಬೇಕಾ ಎಂದಿದ್ದಾರೆ.
ವಿನೋಬನಗರ ಪೊಲೀಸ್ ಠಾಣೆ
ಇದಕ್ಕೆ ಮನೆಯ ನಿವಾಸಿ ಮಹಿಳೆ ಬೇಡ ಎಂದಿದ್ದಾರೆ. ಆದಾಗ್ಯು ಮುಂದುವರಿದ ಆರೋಪಿಗಳು ಪೇಪರ್ ಒಂದರ ಮೇಲೆ ದೂಳು ಎದ್ದೇಳುವ ಹಾಗೆ ಪೌಡರ್ ಒಂದನ್ನ ಸುರಿದಿದ್ದಾರೆ. ಈ ವೇಳೆಗೆ ಮಹಿಳೆಗೆ ಏನೋ ಕಣ್ಕಟ್ಟಾದಂತಾಗಿದೆ. ಅದೇ ಸಂದರ್ಭದ ನೋಡಿಕೊಂಡ ಆರೋಪಿಗಳು ಚಾಕು ತೋರಿಸಿ ಚಿನ್ನದ ಬಳೆ ಬಿಚ್ಚಿ ಕೊಡುವಂತೆ ತಿಳಿಸಿದ್ದಾರೆ. ಏನೂ ತೋಚದಂತೆ ನಿಂತಿದ್ದ ಮಹಿಳೆ ಆರೋಪಿಗಳು ಹೇಳಿದ ಹಾಗೆ ಬಳೆ ತೆಗೆದುಕೊಟ್ಟಿದ್ದಾರೆ. ಅಲ್ಲಿಂದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಜೂನ್, ಜುಲೈ, ಆಗಸ್ಟ್ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್ ನ್ಯೂಸ್ ಇಲ್ಲಿದೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?