SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024
ಶಿವಮೊಗ್ಗ | ರಾಷ್ಟ್ರ ಭಕ್ತ ಬಳಗದ ವತಿಯಿಂದ ಇದೇ ನವೆಂಬರ್ 23ರಂದು ಕಾಶಿ ಹಾಗೂ ಅಯೋದ್ಯೆ ಪ್ರವಾಸವನ್ನು ಕೈಗೊಳ್ಳಲಾಗಿದೆ. ಈ ಸಂಬಂಧ ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಮಹಾಲಿಂಗ ಶಾಸ್ತ್ರಿ ಮಾಹಿತಿ ನೀಡಿದ್ದಾರೆ. ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನವೆಂಬರ್ 23 ರಂದು ನಾವು ರಾಷ್ಟ್ರ ಭಕ್ತ ಬಳಗದ ವತಿಯಿಂದ ಕಾಶಿ ಹಾಗೂ ಅಯೋಧ್ಯೆಗೆ ಪ್ರವಾಸವನ್ನು ಕೈಗೊಂಡಿದ್ದೇವೆ ಎಂದರು.

ನ.23 ರ ಬೆಳಗ್ಗೆ 6.00 ಗಂಟೆಗೆ ಶಿವಮೊಗ್ಗದಿಂದ ಯಾತ್ರಾರ್ಥಿಗಳನ್ನ ಕರೆದುಕೊಂಡು ವಿಶೇಷ ರೈಲು ಹೊರಡಲಿದೆ. ಈ ವಿಶೇಷ ರೈಲಿಗೆ ಬೆಕ್ಕಿನಕಲ್ಮಠ ಸ್ವಾಮಿಗಳು, ಬಸವ ಮರುಳಸಿದ್ದ ಸ್ವಾಮಿ ಗಳು, ಸಾಯಿನಾಥ್ ಸ್ವಾಮಿಜಿಗಳು ಹಸಿರು ನಿಶಾನೆ ತೋರಲಿದ್ದಾರೆ.

ಒಟ್ಟಾರೆ, 1500 ಜನರು ಯಾತ್ರೆಯಲ್ಲಿ ಪಾಲ್ಗೊಳ ಬಿದ್ದು, 24 ಭೋಗಿಗಳಲ್ಲಿ ಪ್ರಯಾಣ ಬೆಳಸಲಿದ್ದಾರೆ. ಇನ್ನೂ ಶಿವಮೊಗ್ಗದಿಂದ ಹೊರಟು ನವೆಂಬರ್ 25 ರ ಬೆಳಗ್ಗೆ 10 ಗಂಟೆಗೆ ವಿಶೇಷ ರೈಲು ಅಯೋಧ್ಯೆ ತಲುಪಲಿದೆ. ನವೆಂಬರ್ 26 ರಂದು ವಿಶೇಷ ರೈಲು ಕಾಶಿ ತಲುಪಲಿದೆ ಎಂದು ಮಹಾಲಿಂಗ ಶಾಸ್ತ್ರಿ ಮಾಹಿತಿ ನೀಡಿದ್ದಾರೆ.
ಎರಡು ದಿನಗಳ ಕಾಲ ಕಾಶಿಯಾತ್ರೆ ಮುಗಿಸಿ ನವೆಂಬರ್ 27 ರಂದು ಅಲ್ಲಿಂದ ಹೊರಟು ನವೆಂಬರ್ 29 ರ ರಾತ್ರಿ ಶಿವಮೊಗ್ಗ ತಲುಪಲಿದ್ದೇವೆ ಎಂದು ತಿಳಿಸಿದ ಅವರು, ಯಾತ್ರೆಗೆ ರೂಪಾಯಿ 7,500 ಶುಲ್ಕವಿದ್ದು, ಯಾತ್ರೆ ಸಮಯದ ಇತ್ಯಾದಿ ಖರ್ಚು ಗಳನ್ನು ರಾಷ್ಟ್ರ ಭಕ್ತ ಬಳಗದ ವತಿಯಿಂದ ಭರಿಸಲಾಗುತ್ತಿದೆ ಎಂದು ತಿಳಿಸಿದರು.
SUMMARY| | DCC Bank Director Mahalinga Shastri said, “We are on a tour of Kashi and Ayodhya on November 23 on behalf of Rashtrabhakta Bhalaga
KEYWORDS| kashi and Ayodhya, Rashtrabhakta Bhalaga, eshwarappa, shivamogga,