ಒತ್ತುವರಿ ತೆರವಿಗೆ ಮುಂದಾದ ಅರಣ್ಯ ಅಧಿಕಾರಿಗಳು | ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯರು

ಹಂಚಿಕೊಳ್ಳಿ
WhatsApp Facebook X Telegram
ಒತ್ತುವರಿ ತೆರವಿಗೆ ಮುಂದಾದ ಅರಣ್ಯ ಅಧಿಕಾರಿಗಳು | ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯರು

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 25, 2025

ಶಿವಮೊಗ್ಗ ತಾಲೂಕಿನ ಮೇಲಿನ ಕುಂಚೇನಹಳ್ಳಿ ತಾಂಡದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ಪ್ರದೇಶವನ್ನು ತೆರವು ಮಾಡಲು ಮುಂದಾದ ವೇಳೆ ಮಹಿಳೆಯರು ವಿಷ ಸೇವಿಸಲು ಯತ್ನಿಸಿರುವ ಘಟನೆ ನಡೆದಿದೆ.

ಏನಿದು ಘಟನೆ

ಕುಂಚೇನಹಳ್ಳಿಯ ರಾಜಪ್ಪ ಹಾಗೂ ಅವರ ಸಹೋದರ ಗ್ರಾಮದ ಸರ್ವೆ ನಂಬರ್ 80 ರಲ್ಲಿದ್ದ 4 ಎಕರೆ ಜಮೀನನ್ನು ಉಳುಮೆ ಮಾಡುತ್ತಿದ್ದರು. ಹಾಗೆಯೇ ಜಾಗದಲ್ಲಿ ಅಡಿಕೆ ತೋಟವನ್ನು ಸಹ ಬೆಳೆದಿದ್ದರು. ಈ ಹಿನ್ನಲೆ ನಿನ್ನೆ ಸುಮಾರು 50 ಹೆಚ್ಚು ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಈ ಪ್ರದೇಶ ಒತ್ತುವರಿ ಎಂದು ತೆರವಿಗೆ ಮುಂದಾದರು. ಆ ವೇಳೆ ಈ ಒತ್ತುವರಿ ತೆರವನ್ನು ವಿರೋಧಿಸಿ ರಾಜಪ್ಪ ಕುಟುಂಬದ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆಯರನ್ನು ಪೊಲೀಸರು ತಡೆದು ಅಸ್ವಸ್ಥಗೊಂಡ ಮಹಿಳೆಯರನ್ನ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

SUMMARY |  In a shocking incident, a group of women tried to consume poison at Upper Kunchenahalli Tanda in Shivamogga taluk when forest department officials tried to clear the encroached area.

KEYWORDS |  Kunchenahalli,  forest department,  poison,encroached area,

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor