SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 31, 2025

ಸಾಮಾನ್ಯವಾಗಿ ಜನರು ಬೇಸಿಗೆಯಲ್ಲಿ ತಂಪಾಗಿರಲು ಹಲವಾರು ತಂಪು ಪಾನಿಯ, ಐಸ್ ಕ್ರೀಂ ಸೇರಿದಂತೆ ಇನ್ನಿತರೆ ತಂಪಾದ ವಸ್ತುಗಳನ್ನು ತಿನ್ನುತ್ತಿರುತ್ತೇವೆ. ಆದರೆ ಈಗ ಐಸ್ಕ್ರೀಂ ಪ್ರಿಯರಿಗೆ ದೊಡ್ಡದೊಂದು ಶಾಕ್ ಎದುರಾಗಿದೆ. ಅದೇನೆಂದರೆ ಆರೋಗ್ಯ ಸುರಕ್ಷತೆ ದೃಷ್ಠಿಯಿಂದ ಐಸ್ ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಮಾಡಿ ಐಸ್ ಕ್ರೀಂನ್ನು ಲ್ಯಾಬ್ಗೆ ಕಳುಹಿಸಿದ್ದಾರೆ.
ಈ ಹಿಂದೆ ಕಬಾಬ್ ಗೋಬಿ ಸೇರಿದಂತೆ ಇನ್ನಿತರೆ ಆಹಾರ ಪದಾರ್ಥಗಳಿಗೆ ಬಳಸುವ ಬಣ್ಣಗಳು ಕ್ಯಾನ್ಸ್ರ್ ಕಾರಕವೆಂದು ಅದನ್ನು ನಿಷೇಧಿಸಲಾಗಿತ್ತು. ಅಷ್ಟೇ ಅಲ್ಲದೆ ಅದನ್ನು ಬಳಸಿದರೆ ಕಠಿಣ ಶಿಕ್ಷೆ ನೀಡುತ್ತೇವೆ ಎನ್ನುವ ಕಾನೂನನ್ನು ಜಾರಿಗೊಳಿಸಲಾಗಿತ್ತು. ಇದರ ನಡುವೆ ಈ ಸಾಲಿಗೆ ಐಸ್ಕ್ರೀಂ ಸಹ ಸೇರಿದ್ದು, ಐಸ್ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಸುರಕ್ಷತಾ ಇಲಾಖೆ ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ಮಾಡಿ ಸ್ಯಾಂಪಲ್ಗಳನ್ನು ಲ್ಯಾಬ್ಗೆ ರವಾನೆ ಮಾಡಿದ್ದಾರೆ. ಲ್ಯಾಬ್ನಲ್ಲಿ ರಿಪೋರ್ಟ್ ಬಂದ ನಂತರವೇ ಐಸ್ಕ್ರೀಂಗೆ ಬಳಸುವ ಕಲರ್ ಆರೋಗ್ಯಕ್ಕೆ ಉತ್ತಮವೋ ಮಾರಕವೋ ಎಂಬುದು ತಿಳಿದು ಬರಲಿದೆ.

SUMMARY | Food safety officials raided the ice cream units and sent them to the ice cream lab for health safety reasons
KEYWORDS | Food safety, ice cream, health safety,