ಕುವೆಂಪು ವಿವಿಯಲ್ಲಿ ಹೈಡ್ರಾಮಾ! ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆಯಾ ಆಡಳಿತ ಮಂಡಳಿ?

This Article Written by / [email protected] / ಏಪ್ರಿಲ್ 29, 2026

ಕುವೆಂಪು ವಿವಿಯಲ್ಲಿ ಹೈಡ್ರಾಮಾ! ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆಯಾ ಆಡಳಿತ ಮಂಡಳಿ?

ಪರೀಕ್ಷೆ ಬರೆದು 5 ತಿಂಗಳಾದರೂ ರಿಸಲ್ಟ್ ಇಲ್ಲ.. 3 ವರ್ಷಗಳಿಂದ ಅಂಕಪಟ್ಟಿಯೇ ಕೊಟ್ಟಿಲ್ಲ! ಇದರ ಜೊತೆಗೆ ದಿಢೀರ್ ಫೀಸ್ ಏರಿಕೆ! ಕುವೆಂಪು ವಿಶ್ವವಿದ್ಯಾಲಯದ ಆಡಳಿತಾತ್ಮಕ ವೈಫಲ್ಯ ಖಂಡಿಸಿ NSUI ಕಾರ್ಯಕರ್ತರು ಇಂದು ಸಿಡಿದೆದ್ದಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕುಲಪತಿ ಶರತ್ ಅನಂತಮೂರ್ತಿ ಅವರ ಕಚೇರಿ ಧ್ವಂಸಗೊಂಡಿದೆ!

ಎನ್.ಎಸ್.ಯು.ಐ (NSUI) ಕಾರ್ಯಕರ್ತರು ಇಂದು ರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ತೀವ್ರ ಸ್ವರೂಪ ಪಡೆದಿದ್ದು, ಕುಲಪತಿಗಳ ಕಚೇರಿಗೆ ನುಗ್ಗಿದ ಕಾರ್ಯಕರ್ತರು, ಅಲ್ಲಿದ್ದ ಪಾಟ್​ಗಳನ್ನು ಒಡೆದು ಹಾಕಿದರು, ಗ್ಲಾಸ್​ಗಳನ್ನು ಪಡಿ ಮಾಡಿದರು. ಅಲ್ಲದೆ ವಿವಿ ಬೋರ್ಡ್​ಗಳಿಗೆ ಪೈಂಟ್ ಸ್ಪ್ರೆ ಹೊಡೆದರು. ಆಕ್ರೋಶಗೊಂಡಿದ್ದ ಕಾರ್ಯಕರ್ತರು ಅಲ್ಲಿದ್ದ ಕುರ್ಚಿಗಳನ್ನು ಕೂಡ ದ್ವಂಸ ಮಾಡಿದರು.

ವಿಶ್ವವಿದ್ಯಾಲಯದ ಆಂತರಿಕ ಕಲಹದಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿರುವುದೇ ಈ ಆಕ್ರೋಶಕ್ಕೆ ಮುಖ್ಯ ಕಾರಣ. ಈ ಹಿಂದೆ ಹಲವು ಸಲ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು ಕುವೆಂಪು ವಿವಿಯಿಂದ ಯಾವೊಂದು ಕ್ರಮ ಕೈಗೊಂಡಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇದೆ ಕಾರಣಕ್ಕೆ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಪ್ರಮುಖ ಆರೋಪಗಳೇನು?

ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರೀ ಎಡವಟ್ಟು (ಪಾಸ್ ಆದವರು ಫೇಲ್!)

ಅಂಕಪಟ್ಟಿ ಇಲ್ಲದೆ ಉದ್ಯೋಗ, ಉನ್ನತ ವ್ಯಾಸಂಗಕ್ಕೆ ಪರದಾಟ.

ಬಡ ವಿದ್ಯಾರ್ಥಿಗಳಿಗೆ ಹೊರೆಯಾದ ಸಾವಿರಾರು ರೂ. ಪ್ರವೇಶ ಶುಲ್ಕ ಹೆಚ್ಚಳ.

ಕುಲಪತಿಗಳ ಕಚೇರಿಯಲ್ಲೇ ಆಂತರಿಕ ಕಚ್ಚಾಟ!

Kuvempu University protest, NSUI Shivamogga, Kuvempu university marks card issue, VC Sharath Ananthamurthy, Shivamogga news, Kannada news live, Student strike Karnataka.#TrendingNews, #ViralVideo, #BreakingNewsKarnataka, #NewsUpdate, #LiveNews

Local News,Malenadu Today.,SHIVAMOGGA,Video News

ಮುಂದಿನ ಸುದ್ದಿ ಒದಿ