HOSANAGARA

3 ಸಬ್ಜೆಕ್​​ನಲ್ಲಿ 100/100, 600 ಕ್ಕೆ 596 ಹೊಸನಗರ ತಾಲೂಕಿನ ಯಡೂರು ವಿದ್ಯಾರ್ಥಿ ನಿಹಾಲ್ ಸಾಧನೆ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಹೊಸನಗರ ತಾಲೂಕಿನ ಯಡೂರು ಗ್ರಾಮದ ವಿದ್ಯಾರ್ಥಿ ನಿಹಾಲ್ ಎಸ್​ಎಸ್​ಎಲ್​ಸಿ ಮಾದರಿಯಲ್ಲಿಯೇ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿರುವ ಪ್ರದೇಶದಿಂದ ಬಂದ ಇವರು, ತಮ್ಮ ವಿದ್ಯಾಭ್ಯಾಸದಲ್ಲಿ ಗಮನಾರ್ಹ ಫಲಿತಾಂಶ ದಾಖಲಿಸಿದ್ದಾರೆ.

ಯಡೂರು ಗ್ರಾಮವು ಮಾನಿ ಆಣೆಕಟ್ಟಿನ ಬಲದಂಡೆಯ ಕೆಳಭಾಗದಲ್ಲಿರುವ ಪ್ರದೇಶ. ನೆಟ್​ವರ್ಕ್​ನಿಂದ ಹಿಡಿದು ಹಲವು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ನಡುವೆ ಯಡೂರಿನ ನಿಹಾಲ್​ ಸೆಕೆಂಡ್ ಪಿಯುಸಿಯಲ್ಲಿ ಅದ್ಭುತ ರಿಸಲ್ಟ್ ತೆಗೆದಿದ್ದಾರೆ ಆರನೂರಕ್ಕೆ ಬರೋಬ್ಬರಿ 596 ಮಾರ್ಕ್​ ಗಳಿಸಿದ್ದಾನೆ.

ಹೊಸನಗರ ತಾಲೂಕಿನ ಯಡೂರು ವಿದ್ಯಾರ್ಥಿ ನಿಹಾಲ್ ಸಾಧನೆಯ ವಿವರ

ನಿಹಾಲ್ ಹೆಚ್.ಜಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭೌತಶಾಸ್ತ್ರ, ಗಣಿತ ಹಾಗೂ ಗಣಕ ವಿಜ್ಞಾನ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿದ್ದಾರೆ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ 99 ಹಾಗೂ ರಸಾಯನಶಾಸ್ತ್ರದಲ್ಲಿ 98 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ (Distinction) ಉತ್ತೀರ್ಣರಾಗಿದ್ದಾರೆ.

ನಿಹಾಲ್ ಅವರ ಈ ಶೈಕ್ಷಣಿಕ ಸಾಧನೆಗೆ ಅವರ ಪೋಷಕರಾದ ಗಣೇಶ್ ಹಾಗೂ ಸಹನಾ ಅವರ ನಿರಂತರ ಬೆಂಬಲ ಕಾರಣವಾಗಿದೆ. ಮಗನ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಟ್ಟ ಪೋಷಕರ ಪಾತ್ರ ಪ್ರಶಂಸನೀಯ.

Yaduru Student Nihal Academic Achievement in PUC exams ಹೊಸನಗರ ತಾಲೂಕಿನ ಯಡೂರು ಗ್ರಾಮದ ವಿದ್ಯಾರ್ಥಿ ನಿಹಾಲ್, 2 ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
Yaduru Student Nihal Academic Achievement in PUC exams ಹೊಸನಗರ ತಾಲೂಕಿನ ಯಡೂರು ಗ್ರಾಮದ ವಿದ್ಯಾರ್ಥಿ ನಿಹಾಲ್, 2 ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ