SHIVAMOGGA | MALENADUTODAY NEWS | Aug 25, 2024 ಮಲೆನಾಡು ಟುಡೆ
ಶಿವಮೊಗ್ಗದಲ್ಲಿ ಇದೇ ಮೊದಲು ಎನ್ನುವಂತ ರೀತಿಯಲ್ಲಿ ಆನೆಯ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗದ ಪುರದಾಳು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಆಲದೇವ ಹೊಸೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಶಿವಮೊಗ್ಗದಲ್ಲಿ ಕಾಡಾನೆ ದಾಳಿ
ಘಟನೆಯಲ್ಲಿ ಹನುಮಂತಪ್ಪ ಎಂಬ ಗದಗ ಜಿಲ್ಲೆ ಲಕ್ಷ್ಮೇಶ್ವರ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇವರು ಇಲ್ಲಿನ ಅಶ್ಫಾಕ್ ಅಹಮದ್ ಖಾನ್ ಎಂಬುವವರಿಗೆ ಸೇರಿದ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆದಿನ ತೋಟಕ್ಕೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಇವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನೂ ಈ ಬಗ್ಗೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನ ಕೃಷ್ಣ ಪಟಗಾರ್ ಮಾತನಾಡಿದ್ದು ನಡೆದ ಘಟನೆಯನ್ನು ಖಚಿತಪಡಿಸಿದ್ದಾರೆ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಪುರದಾಳು, ಚನ್ನಹಳ್ಳಿ, ಮಂಜರಿಕೊಪ್ಪ ಮಲೆಶಂಕರ ಗಡಿಭಾಗದಲ್ಲಿ ಕಾಡಾನೆಗಳ ಓಡಾಟವಿದೆ
ಅಲ್ಲದೆ ಆನೆ ಸರದ ಬಳಿ ಕೆರೆ ಇದ್ದು, ಸುತ್ತಲೂ ಬಿದಿರಿನ ಮೆಳೆ ಇದೆ. ಬಿದಿರು ತಿನ್ನಲು ಅಲ್ಲಿಗೆ ಆನೆಗಳು ಬರುತ್ತಿರುತ್ತವೆ. ಕತ್ತಲೆಯಲ್ಲಿ ಬಹುಶಃ ಹನುಮಂತಪ್ಪ ಆನೆಯನ್ನು ಗಮನಿಸಿರಲಿಕ್ಕಿಲ್ಲ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳು
-
Shivamogga court | @ಜೈಲರ್ ಕೊಲೆ ಕೇಸ್ | ಇಬ್ಬರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ , ಮೂವರಿಗೆ ಐದು ವರ್ಷ ಜೈಲು
-
ವೃದ್ಧಾಪ್ಯ ವೇತನದ ದುಡ್ಡು ಕೇಳಿದ್ರೆ ಗೆಟ್ ಔಟ್ , ಹೋಗಿ ಸಾಯಿ ಅಂತಾರಂತೆ | ಅಜ್ಜಿ ಅಳಲನ್ನ ಆಲಿಸುತ್ತಾ ವ್ಯವಸ್ಥೆ?
-
Anandpur Sagar | ಐತಿಹಾಸಿಕ ಪುಷ್ಕರಣಿಯಲ್ಲಿ ಈಜುವಾಗ ಬೆಂಗಳೂರು ಮೂಲದ ಯುವಕ ಸಾವು