Anandpur Sagar | ಐತಿಹಾಸಿಕ ಪುಷ್ಕರಣಿಯಲ್ಲಿ ಈಜುವಾಗ ಬೆಂಗಳೂರು ಮೂಲದ ಯುವಕ ಸಾವು

ಬೆಂಗಳೂರು ಮೂಲದ ಮೂವರು ಪ್ರವಾಸಿಗರು ಸಾಗರ ತಾಲ್ಲೂಕು ಆನಂದಪುರ ಸಮೀಪದ ಚಂಪಕ ಸರಸು ಪುಷ್ಕರಣಿಗೆ ಬಂದಿದ್ದರು. ಈ ವೇಳೆ ಈಜಲು ತೆರಳಿದ್ದ ಓರ್ವ ಯುವಕ ಸಾವನ್ನಪ್ಪಿದ್ದಾನೆ Bengaluru youth drowns in Champakasarasu pushkarini

Anandpur Sagar | ಐತಿಹಾಸಿಕ ಪುಷ್ಕರಣಿಯಲ್ಲಿ ಈಜುವಾಗ ಬೆಂಗಳೂರು ಮೂಲದ ಯುವಕ ಸಾವು
Bengaluru youth drowns in Champakasarasu pushkarini

SHIVAMOGGA | MALENADUTODAY NEWS | Aug 23, 2024 ಮಲೆನಾಡು ಟುಡೆ  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಸಮೀಪ ಇರುವ ಐತಿಹಾಸಿಕ  ಚಂಪಕ ಸರಸು ಕಲ್ಯಾಣಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ಸಾಗರದ ಆನಂದಪುರ ಬಳಿ ಇರುವ ಚಂಪಕ ಸರಸು ಕಲ್ಯಾಣಿ ಇದಾಗಿದ್ದು,  ಸ್ನೇಹಿತರೊಡನೆ ಇಲ್ಲಿಗೆ ಬಂದಿದ್ದ ಬೆಂಗಳೂರು  ಮೂಲದ ಯವಕ ಕುಶಾಲ್ (22) ಸಾವನ್ನಪ್ಪಿದ್ದಾರೆ. 

ಇವರು ಇಂಜಿನಿಯರ್‌ ಆಗಿದ್ದು, ಬೆಂಗಳೂರಿನಿಂದ ಕಾರಿನಲ್ಲಿ  ಇಲ್ಲಿಗೆ ಬಂದಿದ್ದರು. ಮೂವರು ಇಲ್ಲಿನ ಮಹಂತಿನ ಮಠದಲ್ಲಿರುವ ಚಂಪಕ ಸರಸು ಕಲ್ಯಾಣಿ ನೋಡಲು ಬಂದಿದ್ದಾರೆ. ಈ ವೇಳೆ ಇಲ್ಲಿ ಈಜಾಡಲು ಮುಂದಾಗಿದ್ದಾರೆ. ಮೂವರ ಪೈಕಿ ಓರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 

ಕಳೆದೆರೆಡು ವರ್ಷಗಳ ಹಿಂದೆ ಈ ಕಲ್ಯಾಣಿಯನ್ನ ಚಲನಚಿತ್ರ ನಟ ಯಶ್ ಅವರ ಯಶೋಮಾರ್ಗ ಸಂಸ್ಥೆ ಸ್ವಚ್ಚಗೊಳಿಸಿತ್ತು.  

  ಇನ್ನಷ್ಟು ಸುದ್ದಿಗಳು