ವೃದ್ಧಾಪ್ಯ ವೇತನದ ದುಡ್ಡು ಕೇಳಿದ್ರೆ ಗೆಟ್‌ ಔಟ್‌ , ಹೋಗಿ ಸಾಯಿ ಅಂತಾರಂತೆ | ಅಜ್ಜಿ ಅಳಲನ್ನ ಆಲಿಸುತ್ತಾ ವ್ಯವಸ್ಥೆ?

Malnad Public Complaint Hosanagara Taluk Report | ಹೊಸನಗರ ತಾಲ್ಲೂಕುನಲ್ಲಿ 80 ರ ಹರೆಯದ ಅಜ್ಜಿಯೊಬ್ಬರು ವೃದ್ಯಾಪ್ಯವೇತನದ ದುಡ್ಡಿಗಾಗಿ ಕೇಳಬಾರದು ಕೇಳಿಸಿಕೊಳ್ತಿರುವುದಾಗಿ ಆತಂಕದಿಂದಲೇ ಆರೋಪಿಸುತ್ತಿದ್ದಾಳೆ

ವೃದ್ಧಾಪ್ಯ ವೇತನದ ದುಡ್ಡು ಕೇಳಿದ್ರೆ ಗೆಟ್‌ ಔಟ್‌ , ಹೋಗಿ ಸಾಯಿ ಅಂತಾರಂತೆ  | ಅಜ್ಜಿ ಅಳಲನ್ನ ಆಲಿಸುತ್ತಾ ವ್ಯವಸ್ಥೆ?

SHIVAMOGGA | MALENADUTODAY NEWS | Aug 23, 2024 ಮಲೆನಾಡು ಟುಡೆ  

ಶಿವಮೊಗ್ಗದಲ್ಲಿ ಪ್ರತಿಯೊಂದು ಕೆಲಸಕ್ಕೂ ಶಾಸಕರು ಅವರ ಆಪ್ತರೇ ಬರಬೇಕು ಎನ್ನುವಂತಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ  80 ಬಡ ವೃದ್ದೆಯೊಬ್ಬರು ತಮ್ಮ ಖಾತೆಯಲ್ಲಿರುವ ವೃದ್ದಾಪ್ಯ ವೇತನಕ್ಕಾಗಿ ಪ್ರತಿದಿನ ಬ್ಯಾಂಕ್‌ ವೊಂದರ ಶಾಖೆ ಅಲೆದಾಡುತ್ತಿದ್ದಾರೆ. 

ಸುಕ್ಕು ಹಿಡಿದ ಬದುಕಿಗೆ ಬೇಕಿದೆ ವೃದ್ಯಾಪ್ಯ ವೇತನ

ಆರಿದ ವಯಸ್ಸಿಗೆ ತೂಗುವ ದೇಹ, ಬದುಕಿನುದ್ದಕ್ಕೂ ದುಡಿದು ಭಾಗಿದ ಜೀವ,  ಸುಸ್ತಿನ ದಣಿವೆ ಸಾಕ್ಷಿಯಾಗುತ್ತಿರುವ ಏದುಸಿರಿನ ನಡುವೆ ಇರುವಷ್ಟು ದಿನ ಗಂಜಿ ಕುಡಿಯಲು ವೃದ್ಯಾಪ್ಯ ವೇತನದ ಮೇಲೆ ಹೊಸನಗರ ತಾಲ್ಲೂಕು ಕೆರೆಹಳ್ಳಿ ಹೋಬಳಿಯ ಕಳಸೆ ಗ್ರಾಮದ ದೇವಮ್ಮ ನಿಶ್ಚಯಿಸಿದ್ದಾಳೆ. ಇದು ಆಕೆಗೆ ಅನಿವಾರ್ಯ ಕೂಡ. ಏಕೆಂದರೆ ಬೇರೆ ದುಡಿಮೆಯಿಲ್ಲದ ಬದುಕು ಅವಳದ್ದು, ದುಡಿಯುವ ವಯಸ್ಸು ಆಕೆಯದ್ದಲ್ಲ ಬಿಡಿ. ಸರ್ಕಾರ ಇಂತಹ ನಿಸ್ಸಹಾಯಕರಿಗೆಂದೆ ವೃದ್ಯಾಪ್ಯ ವೇತನ ನೀಡುತ್ತಿದೆ. ಆದರೆ ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತೆ ಅಜ್ಜಿಯ ದುಡ್ಡು ಬ್ಯಾಂಕ್‌ವೊಂದರ ಶಾಖೆಯಲ್ಲಿ ನೀಡುತ್ತಿಲ್ಲವಂತೆ. 

ಕಷ್ಟ ಇದ್ರೆ ಹೋಗಿ ಸಾಯಿ ಅಂತಾರೆ 

ಹೀಗಂತ ಅಜ್ಜಿ ದೂರು ಹೇಳಿಕೊಳ್ಳುತ್ತಿದ್ದಾಳೆ. ನನ್ನ ವೃದ್ದಾಪ್ಯ ವೇತನ ದುಡ್ಡು ಕೇಳಲು ಬಂದಿದ್ದೆ. ಆದರೆ ನನಗೆ ಹೋಗಿ ಸಾಯಿ ಎಂದು ಬೈದು ಕಳುಹಿಸುತ್ತಿದ್ದಾರೆ. ಮಾತು ಆಡಿದರೆ ಹೊಡಿಹೊಡಿಯಾಕೆ ಬರುತ್ತಾರೆ. ಯಾರಿಗೆ ಬೇಕಾದರೂ ಹೇಳಿ ಎನ್ನುತ್ತಾರೆ. ಅದಕ್ಕೆ ರಿಪ್ಪನ್‌ಪೇಟೆ ಪೊಲೀಸರ ಸಹಾಯ ಕೇಳಲು ಬಂದಿದ್ದೇನೆ. ನನಗೆ ಸಹಾಯ ಮಾಡೋರು ಯಾರಿದ್ದಾರೆ ಅಂತಾ ಅಜ್ಜಿ ದೇವಮ್ಮ ನಡುಗವ ಗಂಟಲಲ್ಲಿ ಆತಂಕದ ಕಣ್ಣೋಟ ತೋರಿ ಮಾತನಾಡುತ್ತಿದ್ದಾಳೆ. ಅಲ್ಲದೆ ನಾನು ಸಹಾಯ ಕೇಳಿದ್ರೆ , ಎಂತಾರೂ ಮಾಡ್ತಾರಾ ಅಂತಾ ಭಯವನ್ನು ಸಹ ವ್ಯಕ್ತಪಡಿಸ್ತಿದ್ದಾಳೆ. 

ಬೇಳೂರು ಗೋಪಾಲಕೃಷ್ಣರವರೇ ಪ್ಲೀಸ್‌ ಸಹಾಯ ಮಾಡಿ

ಅಜ್ಜಿಯ ಮಗ ಬ್ಯಾಂಕ್‌ನ ಶಾಖೆಯಲ್ಲಿ ಸಾಲ ಮಾಡಿದ್ದಾನಂತೆ ಆ ಸಾಲಕ್ಕೆ ಅಜ್ಜಿ ಹಣ ಮುರೆ ಹಾಕಿಕೊಳ್ತಿದ್ದಾರೆ ಎಂಬುದು ಇವರ ಆರೋಪ , ಸದ್ಯ ಅಜ್ಜಿ ರಿಪ್ಪನ್‌ಪೇಟೆ ಪೊಲೀಸರ ಸಹಾಯ ಕೇಳಿದೆ. ಕಷ್ಟ ಇದೆ ಯಾರಾದರೂ ಸಹಾಯ ಮಾಡಿ ಅಂತಾ ಅಂಗಲಾಚ್ತಿದೆ. ಸಾಮಾನ್ಯರು ಪ್ರಶ್ನೆ ಮಾಡಿದರೆ ಅಜ್ಜಿಗೆ ಅಂದಂತೆ ಗೆಟ್‌ಔಟ್‌ ಅನ್ನಬಹುದೇನೋ? ಈ ನಿಟ್ಟಿನಲ್ಲಿ  ಹೊಸನಗರದ ಈ ಭಾಗದ ಶಾಸಕ ಬೇಳೂರು ಗೋಪಾಲಕೃಷ್ಣರೇ ಸ್ವಲ್ಪ ಮುತುವರ್ಜಿ ವಹಿಸಬೇಕಿದೆ. ವಹಿಸುತ್ತಾರಾ ಕಾದು ನೋಡೋಣ

  ಇನ್ನಷ್ಟು ಸುದ್ದಿಗಳು