shivamogga bhadravati davanagere ಎಪಿಎಂಸಿ ಅಡಿಕೆ ಆಯನೂರಿಗೆ ಶಿಫ್ಟ್ ದಾಖಲಾಯ್ತು ಕೇಸ್
shivamogga bhadravati davanagere ಎಪಿಎಂಸಿ ಯಾರ್ಡ್‌ನಿಂದ ಶಿವಮೊಗ್ಗದ ಗಾಡಿಕೊಪ್ಪಕ್ಕೆ ಸಾಗಿಸಬೇಕಿದ್ದ ಅಡಿಕೆಯನ್ನು ಆಯನೂರಿನಲ್ಲಿ ಇಳಿಸಿ, ಮಾಲೀಕರಿಗೆ ವಂಚಿಸಿದ ಪ್ರಕರಣದಲ್ಲಿ ತುಂಗಾನಗರ ಪೊಲೀಸರು ಓರ್ವನನ್ನು ಅರೆಸ್ಟ್ ಮಾಡಿದ್ದಾರೆ. ಗೂಡ್ಸ್ ವಾಹನದ ಚಾಲಕನೊಬ್ಬ, ಎಪಿಎಂಸಿಯಿಂದ ಅಡಿಕೆಯನ್ನು ಲೋಡ್ ಮಾಡಿಕೊಂಡು ಗಾಡಿಕೊಪ್ಪದಲ್ಲಿ ಡಂಪ್ ಮಾಡಬೇಕಿತ್ತು. ಆದರೆ ಆತ ಲೋಡ್ನ್ನ ಆಯನೂರಿನ ಸ್ಥಳವೊಂದರಲ್ಲಿ ಇಳಿಸಿದ್ದ. ಅಲ್ಲದೆ ಆ ಬಳಿಕ ಯಾರ ಫೋನ್ ಕರೆಗೂ ಉತ್ತರಿಸಿದೆ. ಮನೆಯಲ್ಲಿದ್ದ, ಈ ಸಂಬಂದ ಮಾಲೀಕರ ದೂರು ಆಧರಿಸಿ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಭದ್ರಾವತಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಳ್ಳತನ shivamogga bhadravati davanagere
ಬೈಕ್‌ನಲ್ಲಿ ತೆರಳುತ್ತಿದ್ದ 74 ವರ್ಷದ ಮಹಿಳೆಯೊಬ್ಬರ ಕೊರಳಲ್ಲಿದ್ದ 51 ಗ್ರಾಂ ಮಾಂಗಲ್ಯ ಸರವನ್ನು ಮತ್ತೊಂದು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕದ್ದೊಯ್ದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಇಲ್ಲಿನ ವಿಐಎಸ್ಎಲ್ ಕಾರ್ಖಾನೆ ಸಮೀಪ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಬೈಕ್ನಿಂದ ಬಿದ್ದ ಮಹಿಳೆ ಗಾಯಗೊಂಡಿದ್ದಾರೆ. ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
ಆನ್‌ಲೈನ್ ಗೇಮ್‌ಗೆ 18 ಲಕ್ಷ ರೂ. ಕಳೆದುಕೊಂಡು ಯುವಕ ಆತ್ಮಹತ್ಯೆ: ದಾವಣಗೆರೆಯಲ್ಲಿ ದುರ್ಘಟನೆ
ಆನ್‌ಲೈನ್ ಗೇಮ್‌ನಲ್ಲಿ ಬರೋಬ್ಬರಿ 18 ಲಕ್ಷ ರೂಪಾಯಿ ಕಳೆದುಕೊಂಡ ಯುವಕನೊಬ್ಬ ಕೊನೆಗೆ ನೇಣಿಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಸರಸ್ವತಿ ನಗರದ ಶಶಿ ಕುಮಾರ್ (25) ಎಂದು ಗುರುತಿಸಲಾಗಿದೆ. ಈತ ಸಾವಿಗೂ ಮೊದಲೂ ಆನ್‌ಲೈನ್ ಗೇಮ್ಗಳನ್ನು ನಿಷೇಧಿಸುವಂತೆ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ (ಡಿಸಿ) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ) ಮೂಲಕ ಮನವಿ ಸಲ್ಲಿಸಿದ್ದ ಆನಂತರ ತನ್ನ ಪ್ರಯತ್ನಗಳಿಂದ ಯಾವುದೇ ಪ್ರಜೋಜವಾಗಿಲ್ಲವೆಂದು ತಿಳಿದ ಯುವಕ ಸೆಲ್ಪಿ ವಿಡಿಯೋ ಮಾಡಿ , ಅದರಲ್ಲಿ ತನ್ನ ನೋವು ತೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಡಿಯೋದಲ್ಲಿ ನನ್ನಂತೆ ಹಣ ಕಳೆದುಕೊಂಡು ನೋವು ಅನುಭವಿಸುವವರ ಸಂಖ್ಯೆ ಕಡಿಮೆಯಾಗಲಿ” ಎಂದು ಹೇಳಿಕೊಂಡಿದ್ದಾನೆ.
