tyavarekoppa lion and tiger safari / ಪ್ರವಾಸಿಗರಿಗೆ ಗುಡ್​ ನ್ಯೂಸ್​ / ಲಯನ್​ ಸಫಾರಿಗೆ ಹೊಸ 3 ಹುಲಿಗಳ ಎಂಟ್ರಿ! / ಯಾವಾಗ ಗೊತ್ತಾ

Malenadu Today

tyavarekoppa lion and tiger safari  ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮಕ್ಕೆ ಬರಲಿವೆ ಮಹಾರಾಷ್ಟ್ರದಿಂದ ಹೊಸ ಹುಲಿಗಳು

tyavarekoppa lion and tiger safari / ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ  ಹೊಸ ಹುಲಿಗಳ ತಂಡವೇ ಮಹಾರಾಷ್ಟ್ರದಿಂದ ಆಗಮಿಸಲಿದೆ. ಹೌದು ಮಹಾರಾಷ್ಟ್ರದ ಔರಂಗಾಬಾದ್ ಮೃಗಾಲಯದಿಂದ ಒಂದು ಗಂಡು ಮತ್ತು ಎರಡು ಹೆಣ್ಣು ಹುಲಿಗಳನ್ನು ತರಲು ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಸಮ್ಮತಿಸಿದೆ. 

tyavarekoppa lion and tiger safari
tiger in lion safari

tyavarekoppa lion and tiger safari

ಔರಂಗಾಬಾದ್‌ನಿಂದ ಹುಲಿಗಳನ್ನು ತರಲು ಅನುಮತಿ ಲಭ್ಯವಾಗಿದ್ದು, ಹುಲಿಗಳಿಗೆ ಬದಲಾಗಿ ಲಯನ್​ ಸಫಾರಿಯಿಂದ ಆಸ್ಟ್ರಿಚ್ ಪಕ್ಷಿಗಳನ್ನು ಔರಂಗಾಬಾದ್​ ಮೃಗಾಲಯಕ್ಕೆ ರವಾನೆ ಮಾಡಲಾಗುತ್ತದೆ. ಬರುವ ಜುಲೈ ತಿಂಗಳ ಅಂತ್ಯದ ವೇಳೆಗೆ ಸಿಂಹಧಾಮಕ್ಕೆ ಹೊಸ ಹುಲಿಗಳು ಪ್ರವೇಶ ಮಾಡಲಿವೆ. 

- Advertisement -
tiger in lion safari
tiger in lion safari

ರಾಜ್ಯಮಟ್ಟದ ವರದಿ ಪ್ರಕಾರ, ಪ್ರಸ್ತುತ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದಲ್ಲಿ  ನಾಲ್ಕು ಹುಲಿಗಳಿವೆ. ಈ ಪೈಕಿ 18 ವರ್ಷದ ಸೀತಾ ಮತ್ತು 16 ವರ್ಷದ ದಶಮಿಗೆ ವಯಸ್ಸಾಗಿದೆ.  ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೆರೆಸಿಕ್ಕಿದ್ದ ಎರಡು ಗಂಡು ಹುಲಿಗಳನ್ನು ಸಫಾರಿಗೆ ಬಿಡುವಂತಿಲ್ಲ. ಮೇಲಾಗಿ ಸಂತಾನೋತ್ಪತ್ತಿಗೆ ಇಲ್ಲಿ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಎರಡು ಹೆಣ್ಣು ಹುಲಿಗಳನ್ನು ತರಿಸಿಕೊಳ್ಳಲಾಗುತ್ತಿದೆ. ಔರಂಗಾಬಾದ್‌ನಿಂದ ಹೊಸ ಹುಲಿಗಳು ಬಂದ ನಂತರ, ಶಿವಮೊಗ್ಗ ಮೃಗಾಲಯ ಮತ್ತು ಸಫಾರಿಯಲ್ಲಿ ಒಟ್ಟು ಏಳು ಹುಲಿಗಳನ್ನು ಕಾಣಬಹುದಾಗಿದೆ. 

Share This Article
1 Comment

Leave a Reply

Your email address will not be published. Required fields are marked *