Tunga River Flooding
Shivamogga news / ತುಂಗಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರು ಜಲಾಶಯದಿಂದ ಭಾರೀ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ಶಿವಮೊಗ್ಗ ಸಿಟಿಯಲ್ಲಿ ತುಂಗಾ ನದಿಯು ಕೊರ್ಪಳ್ಳಯ್ಯ ಮಂಟಪದ ಮೇಲೆ ಹರಿಯುತ್ತಿದೆ. ಆದ್ದರಿಂದ ಅಲರ್ಟ್ ಆಗಿರುವ ಮಹಾನಗರ ಪಾಲಿಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯ ಬಗ್ಗೆ ಜನರಿಗೆ ಮೈಕ್ ಅನೌನ್ಸ್ಮೆಂಟ್ ಮಾಡುತ್ತಿದೆ.

ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿರುವುದರಿಂದ ಒಳಹರಿವಿನಷ್ಟೆ ಪ್ರಮಾಣದ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಸುಮಾರು 75 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ತುಂಗಾ ನದಿಗೆ ಹೊಂದಿಕೊಂಡಿರುವ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಂಭವವಿದೆ ಎಂದು ಮಹಾನಗರ ಪಾಲಿಕೆ ಮೈಕ್ ಅನೌನ್ಸ್ಮೆಂಟ್ಗಳ ಮೂಲಕ ಎಚ್ಚರಿಕೆ ಸಂದೇಶವನ್ನು ನೀಡುತ್ತಿದೆ.