thirthahalli news 21-06-2025 : ಮೆಕಾನಿಕ್ ಮಗನ ಸಾಧನೆ ಮೆಚ್ಚಿದ ಮಲೆನಾಡು

prathapa thirthahalli
Prathapa thirthahalli - content producer

thirthahalli news : ಮೆಕಾನಿಕ್ ಮಗನ ಸಾಧನೆ ಮೆಚ್ಚಿದ ಮಲೆನಾಡು

ತಾಲೂಕಿನ ಮೇಗರವಳ್ಳಿಯ ನರಸಿಂಹ ಮೂರ್ತಿ ಪ್ರಭು ಅವರ ಪುತ್ರ ಸುಶಾಂತ್ ಎನ್ ಪ್ರಭು ಅವರು ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಟಿ ಕಾನ್ಪುರಕ್ಕೆ (IIT Kanpur)ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ವಿಶೇಷವಾಗಿ ತೀರ್ಥಹಳ್ಳಿ ತಾಲೂಕಿಗೆ ಅಪಾರ ಹೆಮ್ಮೆ ತಂದಿದ್ದಾರೆ. 

ಮೇಗರವಳ್ಳಿ ಗ್ರಾಮದ ನರಸಿಂಹಮೂರ್ತಿ ಬೈಕ್ ಗ್ಯಾರೇಜ್ ನಲ್ಲಿ ಸುಶಾಂತ್ ತಂದೆಗೆ ನೆರವಾಗುತ್ತಿದ್ದರು. ಈ ಸಂದರ್ಭ ಬೈಕ್​​ಗಳ ಬಿಡಿಭಾಗಗಳ ಕೆಲಸಗಳನ್ನು ತಂದೆಯಿಂದ ತಿಳಿದರು. ಆನಂತರ 2022 ರಲ್ಲಿ ಬೈಕ್​​ಗಳ ಸೆಲ್ ಚೈನ್ ಅಡ್ಜಸ್ಮೆಂಟ್ಸಿಸ್ಟಮ್ ಹೆಸರಿನ ಪ್ರಾಜೆಕ್ಟ್ ತಯಾರಿಸಿದ ಸುಶಾಂತ್ ರಾಷ್ಟ್ರೀಯ ಮಟ್ಟದ ಪ್ರಾತ್ಯಕ್ಷಿಕೆ ಆಯ್ಕೆಯಾದರು . ಈ ನಡುವೆ ಸುರತ್ಕಲ್​ನಲ್ಲಿ ಐಐಟಿ ಬಗ್ಗೆ ಅರಿತ ಸುಶಾಂತ್ ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೋತ್ಥಾನ ಪರಿಷತ್​ನ ಶಾಲೆಯಲ್ಲಿ ಓದುತ್ತಾ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗಿ ಐಐಟಿ ಕಾನ್ಪುರದಲ್ಲಿ ಬಿ.ಟೆಕ್ ವ್ಯಾಸಂಗ ಮಾಡಲು ಆಯ್ಕೆಯಾಗಿದ್ದಾರೆ. ಮಗನ ಸಾಧನೆಗೆ ಇಡೀ ಕುಟುಂಬ ಹರ್ಷ ವ್ಯಕ್ತಪಡಿಸಿದೆ.

- Advertisement -
Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1 Comment

Leave a Reply

Your email address will not be published. Required fields are marked *