theft case : ಮದುವೆಗೆ ತೆರಳಿದ್ದ ದಂಪತಿಗೆ ಶಾಕ್​ | 4.97 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಕಳ್ಳತನ

prathapa thirthahalli
Prathapa thirthahalli - content producer

theft case : ಶಿವಮೊಗ್ಗ | ಮದುವೆಗೆಂದು ಕಲ್ಯಾಣ ಮಂಟಪಕ್ಕೆ ತೆರಳಿದ್ದ ದಂಪತಿಗಳಿಗೆ ಶಾಕ್ ಎದುರಾಗಿದೆ. ಅದೇನೆಂದರೆ ಕಲ್ಯಾಣ ಮಂಟಪದ ಕೊಠಡಿಯಲ್ಲಿ ಇಟ್ಟಿದ್ದ ಬ್ಯಾಗಿನಿಂದ ಕಳ್ಳರು ಲಕ್ಷಾಂತರ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಿದ್ದಾರೆ. ಈ ಘಟನೆ ನಗರದ ಮದಾರಿಪಾಳ್ಯದ ಹೆವೆನ್‌ ಪ್ಯಾಲೆಸ್‌ ಕಲ್ಯಾಣ ಮಂಟಪದಲ್ಲಿ ಸಂಭವಿಸಿದ್ದು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

theft case : ಹೇಗಾಯ್ತು ಘಟನೆ

ಅರಸೀಕೆರೆಯ ನಿವಾಸಿಗಳಾದ ಮೆಹಬೂಬ ಪಾಷಾ ಎಂಬುವವರ ಕುಟುಂಬ ಶಿವಮೊಗ್ಗದ ಮದಾರಿಪಾಳ್ಯದ ಹೆವೆನ್‌ ಪ್ಯಾಲೆಸ್‌ ಕಲ್ಯಾಣ ಮಂಟಪಕ್ಕೆ ಸಂಂಬಂಧಿಕರ ಮದುವೆಗೆಂದು ಆಗಮಿಸಿದ್ದರು.ಹಾಗೆಯೇ ಅಂದು ಮಂಟಪದ ಕೊಠಡಿಯಲ್ಲಿ ಬ್ಯಾಗನ್ನು ಇರಿಸಿ ಸಂಬಾಂಗಣಕ್ಕೆ ತೆರಳಿದ್ದರು. ಮದುವೆ ಮುಗಿಸಿ ವಾಪಾಸ್ ಬರುವಷ್ಟರಲ್ಲಿ ಕಳ್ಳರು ಬ್ಯಾಗಿನಲ್ಲಿದ್ದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾರೆ.

- Advertisement -

ಕಳ್ಳರು ಬ್ಯಾಗ್​ನಲ್ಲಿದ್ದ ಚಿನ್ನದ ಸರ ಮತ್ತು ಪೇಟೆಂಟ್, ಉಂಗುರಗಳು, ಮಾಂಗಲ್ಯ ಸರ, ಕಿವಿ ಒಲೆಗಳು ಸೇರಿ ಒಟ್ಟು 71 ಗ್ರಾಂ  ಮೌಲ್ಯದ  4.97 ಲಕ್ಷ ರೂಪಾಯಿಯ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ದಂಪತಿಗಳು ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಕಳ್ಳರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

TAGGED:
Share This Article
Leave a Comment

Leave a Reply

Your email address will not be published. Required fields are marked *