theft case :  ಪೂಜೆಗೆ ತೆರಳಿದ್ದವರಿಗೆ ಬೆಳ್ಳಂಬೆಳಗ್ಗೆ ಫೋನ್​ ಮಾಡಿ ಶಾಕ್​ ಕೊಟ್ಟ ಪಕ್ಕದ ಮನೆಯವರು | ಮನೆಗೆ ಬಂದಾಗ ಕಾದಿತ್ತು ಶಾಕ್​

prathapa thirthahalli
Prathapa thirthahalli - content producer

theft case :  ಕಳ್ಳರು ಮನೆಯ ಬಾಗಿಲನ್ನು ಒಡೆದು ನಗದು ಹಾಗೂ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ  ನಗರದ ಬೊಮ್ಮನಕಟ್ಟೆಯ ವಾಸಿ ಪ್ರವೀಣ​ ಎಂಬುವವರು ಮನೆಯಲ್ಲಿ ನಡೆದಿದೆ. ಘಟನೆ ಸಂಬಂಧ ವಿನೋಬಾ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

theft case :  ಹೇಗಾಯ್ತು ಘಟನೆ

ಮೇ 16 ರಂದು ಪ್ರವೀಣ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಶಿಕಾರಿಪುರ ತಾಲೂಕಿನಲ್ಲಿರುವ ಸಂಬಂಧಿಕರ ಮನೆಗೆ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದರು.ಆ ದಿನ ಸಂಬಂಧಿಕರ ಮನೆಯಲ್ಲಿಯೇ ಉಳಿದಿದ್ದರು. ನಂತರ ಮಾರನೇ ದಿನ (ಮೇ 17) ಪ್ರವೀಣ್​ ರವರ ಪಕ್ಕದ ಮನೆಯವರು ನಿಮ್ಮ ಮನೆಯ ಬಾಗಿಲನ್ನು ಯಾರೋ ಕಳ್ಳರು ಒಡೆದಿದ್ದಾರೆ ಎಂದು ಫೋನ್​ ಮಾಡಿ  ತಿಳಿಸಿದ್ದಾರೆ. ಕೂಡಲೇ ಗಾಬರಿಯಿಂದ ಮನೆಗೆ ಬಂದು ನೋಡಿದಾಗ  ರೂಮ್ ನಲ್ಲಿ ಮರದ ಬೀರ್ ನಲ್ಲಿಟ್ಟಿದ್ದ 5 ಸಾವಿರ ರೂಪಾಯಿ ನಗದು ಹಣ ಹಾಗೂ ಒಟ್ಟು  3.5 ಗ್ರಾಂ ತೂಕದ 20 ಸಾವಿರ ಮೌಲ್ಯದ ಬಂಗಾರವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಹಿನ್ನಲೆ ಪ್ರವೀಣ ಕಳ್ಳರನ್ನು ಪತ್ತೆ ಮಾಡಿ ವಸ್ತುಗಳನ್ನು ಹುಡುಕಿಕೊಡಬೇಕೆಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ.

- Advertisement -

 

TAGGED:
Share This Article
Leave a Comment

Leave a Reply

Your email address will not be published. Required fields are marked *