ಸೊರಬದ ಪೆಟ್ರೋಲ್ ಬಂಕ್ ಒಂದರ ಎದುರಿಗೆ ನಿಲ್ಲಿಸಿದ್ದ ಲಾರಿಯೊಂದು ಕಳ್ಳತನವಾಗಿರುವ ಘಟನೆ ನಡೆದಿದೆ.
ಮಳೆಗಾಲ ಬಾಡಿಗೆ ಇಲ್ಲ ಎಂಬ ಕಾರಣದಿಂದ ಲಾರಿಯ ಮಾಲೀಕ ಆರೀಫ್ ಅಹಮದ್ ಯಾವಾಗಲೂ ಸೊರಬಾದ ಪೆಟ್ರೋಲ್ ಬಂಕ್ ಒಂದರ ಎದುರಿಗೆ ಲಾರಿಯನ್ನು ನಿಲ್ಲಿಸುತ್ತಿದ್ದರು. ಸೋಮವಾರ ಯಾವುದೋ ಬಾಡಿಗೆ ಬಂತು ಎಂದು ಬೆಳಿಗ್ಗೆ 4:30 ಕ್ಕೆ ಡ್ರೈವರ್ ಹೋಗಿ ಪೆಟ್ರೋಲ್ ಬಂಕ್ನಲ್ಲಿ ನೋಡಿದಾಗ ಲಾರಿ ಸ್ಥಳದಲ್ಲಿ ಇರಲಿಲ್ಲ. ನಂತರ, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಳ್ಳರು ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.
- Advertisement -
Theft case
TAGGED:theft case

