ಶಿವಮೊಗ್ಗ ಜೈಲ್​ ಅಧಿಕಾರಿಗಳನ್ನೇ ಯಾಮಾರಿಸಲು ಪ್ಲಾನ್!!! ಗೇಟ್​ನಲ್ಲಿಯೇ ಫೇಲ್​!

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:   ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸುತ್ತಿದ್ದ ಆರೋಪ ಸಂಬಂಧ ಎರಡು ಬೇರೆ ಬೇರೆ ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣಗಳು ಸಹ ಅದರದ್ದೆ ಕಾರಣಕ್ಕೆ ಕುತೂಹಲ ಮೂಡಿಸಿದೆ. 

ಬಿಸ್ಕತ್​ ಪ್ಯಾಕ್​ನಲ್ಲಿ ಗಾಂಜಾ ಸಾಗಾಟ 

ಮೊದಲೇ ಪ್ರಕರಣದಲ್ಲಿ ಮೂವರು ಯುವಕರು  ಬಿಸ್ಕೆಟ್ ಪ್ಯಾಕೆಟ್‌ನಲ್ಲಿ ಗಾಂಜಾ, ಸಿಗರೇಟ್ ಇಟ್ಟು ವಿಚಾರಣಾಧೀನ ಕೈದಿಗೆ ನೀಡಲು ಬಂದಿದ್ದರು. ಅವರನ್ನು ತಪಾಸಣೆಗೆ ಒಳಪಡಿಸಿದ ಸಂಧರ್ಭದಲ್ಲಿ ಈ ವಿಚಾರ ಗೊತ್ತಾಗಿದೆ.  ಮೂರು ಜನರನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ವಿಚಾರಣಾಧೀನ ಕೈದಿ ಮಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನನ್ನು ಮಾತನಾಡಿಸಲು ಭದ್ರಾವತಿ ನಿವಾಸಿಗಳಾದ ರಾಹಿಲ್ (19) ಮತ್ತು ತಸೀರುಲ್ಲಾ (19) ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು.

- Advertisement -

ಈ ವೇಳೆ ಮಹಮ್ಮದ್ ಗೌಸ್‌ಗೆ ನೀಡಲು ಮೂರು ಪ್ಯಾಕೆಟ್ ಬಿಸ್ಕೆಟ್ ತಂದಿದ್ದರು. ಈ ಪ್ಯಾಕೆಟ್‌ಗಳನ್ನು ಕೆಎಸ್‌ಐಎಸ್‌ಎಫ್ ಪಡೆ ಸಿಬ್ಬಂದಿ ಪರಿಶೀಲಿಸಿದಾಗ ಒಳಗೆ ಗಮ್ ಟೇಪ್‌ನಲ್ಲಿ ಸುತ್ತಿದ್ದ ವಸ್ತುಗಳು ದೊರೆತಿವೆ. ಇವುಗಳಲ್ಲಿ ಗಾಂಜಾ, ಸಿಗರೇಟ್ ಗಳು ದೊರೆತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತಾಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ ರಂಗನಾಥ್​  ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದು, ದೂರಿನನ್ವಯ ಕೇಸ್ ದಾಖಲಾಗಿದೆ.  

Jail Security Check Mobile Phone
Jail Security Check

ಜೈಲಿಗೆ ಮೊಬೈಲ್ ತಂದ ಸಜಾ ಬಂದಿ Mobile Phone 

ಇನ್ನೊಂದು ಪ್ರಕರಣದಲ್ಲಿ ಕೈದಿಯೇ ತನ್ನ ಮೊಣಕಾಲಿಗೆ ಕಾರ್ಬನ್​ ಟೇಪ್​ ಸುತ್ತಿಕೊಂಡು ಅದರೊಳಿಗೆ ಮೊಬೈಲ್​ ಇಟ್ಟುಕೊಂಡು ಜೈಲಿನೊಳಗೆ ಸಾಗಿಸ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ.  ಸಜಾ ಬಂದಿ ಮುಜೀಬ್ ಎಂಬಾತನಿಂದ ಜೈಲಿನ ಭದ್ರತಾ ಸಿಬ್ಬಂದಿ ಮೊಬೈಲ್ ವಶಪಡಿಸಿಕೊಂಡು, ದೂರು ನೀಡಿದ್ದಾರೆ.

ಸಜಾ ಬಂದಿಯನ್ನು ವಿಚಾರಣೆಗಾಗಿ ಭದ್ರಾವತಿ ನ್ಯಾಯಾಲಯಕ್ಕೆ ಶುಕ್ರವಾರ ಕರೆದೊಯ್ಯಲಾಗಿತ್ತು. ಮರಳಿ ಕರೆ ತಂದಾಗ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ ವೇಳೆ ಬಲ ಮೊಣಕಾಲಿನ ಬಳಿ ಟೇಪ್‌ನಲ್ಲಿ ಸುತ್ತಿದ ಕೀ ಪ್ಯಾಡ್ ಮೊಬೈಲ್ ಕಂಡುಬಂದಿದೆ. ಕಾರಾಗೃಹದ ಸಿಬ್ಬಂದಿ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Central Prison drug smuggling, Ganja in biscuit packet arrest, Mobile phone seized in Shimoga Jail, KSISF security action,Jail security measures Shimoga, Inmate smuggling mobile phone, How drugs are smuggled into jail,ಶಿವಮೊಗ್ಗ ಕೇಂದ್ರ ಕಾರಾಗೃಹ, ಗಾಂಜಾ ಸಾಗಾಟ, ಬಿಸ್ಕೆಟ್ ಪ್ಯಾಕೆಟ್, ಮೊಬೈಲ್ ವಶ, ಕೈದಿ ಬಂಧನ, ಭದ್ರತಾ ಸಿಬ್ಬಂದಿ, ತುಂಗಾ ನಗರ ಪೊಲೀಸ್ ಠಾಣೆ, ಸಜಾಬಂದಿ, ವಿಚಾರಣಾಧೀನ ಕೈದಿ,

Three Arrested for Smuggling Ganja Mobile Phone in Shimoga Central Jail  

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *