shivamogga news today : ಜೆಸಿಐ ಭಾವನಾ ಸಂಸ್ಥೆಯಿಂದ ತುಂಗೆಗೆ ಬಾಗಿನ ಅರ್ಪಣೆ
ಜಿಲ್ಲೆಯಾದ್ಯಂತ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಇಂದು ಶಿವಮೊಗ್ಗದ ಜೆಸಿಐ ಭಾವನಾ ಸಂಸ್ಥೆಯಿಂದ ತುಂಗಾ ನದಿಗೆ ಬಾಗಿನ ಅರ್ಪಿಸಲಾಯಿತು.
ನಗರದ ಕೋರ್ಪಲ್ಲಯ್ಯನ ಛತ್ರದ ತುಂಗಾ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಜೆಸಿ ರೇಖಾ ರಂಗನಾಥ್ ಅವರ ನೇತೃತ್ವದಲ್ಲಿ ಬಾಗಿನ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಜೆಸಿ ಚೈತ್ರಾ ಪಿ ಸಜ್ಜನ, ಜೆಸಿ ಸುರೇಖಾ ಮುರಳೀಧರ್, ಜೆಸಿ ಪುಷ್ಪಾ ಶೆಟ್ಟಿ, ಜೆಸಿ ಮಾಲರಾಮಪ್ಪ, ಜೆಸಿ ಲಲಿತಾ ಗುರುಮೂರ್ತಿ, ಜೆಸಿ ಕರಿಬಸಮ್ಮ, ಜೆಸಿ ವಂದನಾ ದಿನೇಶ್, ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

