SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ
ಶಿವಮೊಗ್ಗದಲ್ಲಿ 112 ಪೊಲೀಸ್ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬೇಕು ಏಕೆಂದರೆ ಪ್ರತಿದಿನ ಮದ್ಯಪಾನ ಮಾಡಿ ಮನೆಯಲ್ಲಿಯೋ, ಬೀದಿಯಲ್ಲಿಯೋ, ಅಕ್ಕಪಕ್ಕದವರ ಜೊತೆಗೋ ಗಲಾಟೆ ಮಾಡಿಕೊಳ್ಳುವವರನ್ನು ಸುಧಾರಿಸುವುದರ ಜೊತೆಗೆ ಅನಿರೀಕ್ಷಿತವಾಗಿ ಎದುರಾಗುವ ಘಟನೆಗಳಲ್ಲಿ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಈ ಹಿಂದೆ ಶಿವಮೊಗ್ಗದ 112 ಪೊಲೀಸ್ ಸಿಬ್ಬಂದಿ ಮಳೆ ನೀರಿನ ರಭಸದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನ ಜೀವದ ಅಪಾಯವನ್ನು ಲೆಕ್ಕಿಸದೆ ಕಾಪಾಡಿದ್ದ ಉದಾಹರಣೆ ಇದೆ. ಅಲ್ಲದೆ ಬದುಕೇ ಬೇಡ ಎಂದು ಕೈ ಚೆಲ್ಲಿ ತನ್ನಿಬ್ಬರು ಮಕ್ಕಳ ಜೊತೆಗೆ ಹೊಳೆಗೆ ಹಾರಲು ಇನ್ನೇನು ಮುಂದಾಗಿದ್ದ ತಾಯಿಯನ್ನ ಅಕ್ಷರಶಃ ಹೊಳೆಗೆ ಇಳಿದು ಎಳೆದು ತಂದಿದ್ದ 112 ಸಿಬ್ಬಂದಿಗೆ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಸನ್ಮಾನವನ್ನು ಮಾಡಿದ್ದರು.
ಇದೀಗ ಅಂತಹುದ್ದೆ ಒಂದು ಉದಾಹರಣೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಸಾಯಲು ಹೊರಟಿದ್ದ ಮಹಿಳೆಯೊಬ್ಬಳನ್ನ 112 ಸಿಬ್ಬಂದಿ ತಡೆದಿದ್ದಾರೆ. ಅಲ್ಲದೆ ಆಕೆಯ ಮನವೊಲಿಸಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆ.
ಇವತ್ತಿಗೆ ಮೂರು ದಿನಗಳ ಹಿಂದೆ ಕೋಟೆ ಪೊಲೀಸ್ ಸ್ಟೇಷನ್ ಲಿಮಿಟ್‌ನಲ್ಲಿ ಶಿವಮೊಗ್ಗ 112 ಸಿಬ್ಬಂದಿಗೆ ಕರೆಯೊಂದು ಬಂದಿದೆ. ಇಲ್ಲೊಬ್ಬ ಮಹಿಳೆ ವರ್ತನೆ ಅನುಮಾಸ್ಪದವಾಗಿದೆ. ಅವರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂದು ಅನಿಸುತ್ತಿದ್ದಾರೆ ಅಂತಾ ಯಾರೋ ಒಬ್ಬರು ಕರೆ ಮಾಡಿ ಹೇಳಿದ್ದರು.
ತಕ್ಷಣವೇ ಅಲರ್ಟ್ ಆದ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಆಕೆ ಆತ್ಮಗತ್ಯೆಗೆ ಪ್ರಯತ್ನಿಸುತ್ತಿರುವುದು ಸಿಬ್ಬಂದಿಗೂ ಖಚಿತವಾಗಿದೆ. ಆನಂತರ ಆಕೆಯನ್ನ ರಕ್ಷಿಸಲು ಮುಂದಾದ ಪೊಲೀಸರು ಆಕೆಯೊಂದಿಗೆ ಮಾತನಾಡಲು ಆರಂಭಿಸಿದ್ದಾರೆ.
ಜಸ್ಟ್ ಮಾತ್ ಮಾತಲ್ಲಿ ಆಕೆಯಲ್ಲಿದ್ದ ಯೋಚನೆಯನ್ನು ಬದಲಾಯಿಸಿದ್ದಾರೆ. ಆ ಬಳಿಕ ಸಮಾಧಾನ ಹೇಳಿ, ಬದುಕಿನ ರಿಯಾಲಿಟಿ ಅರ್ಥ ಮಾಡಿಸಿ ಶಿವಮೊಗ್ಗದ ಬಸ್ ನಿಲ್ದಾಣದಲ್ಲಿರುವ ಮಹಿಳೆಯ ಲಾಂಜ್‌ಗೆ ಬಿಟ್ಟು ಬಂದು, ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
Shivamogga | 30 ಸಾವಿರ ಕ್ಯೂಸೆಕ್ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ
ಶಿವಮೊಗ್ಗ-ಶಿರಾಳಕೊಪ್ಪ ಟೋಲ್ ಗೇಟ್ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?
Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ | ನಾಲ್ವರು ಅರೆಸ್ಟ್