SHIVAMOGGA | MALENADUTODAY NEWS | Sep 5, 2024
ಶಿವಮೊಗ್ಗ ಪೊಲೀಸ್ ಇಲಾಖೆ ಏರಿಯಾ ಡಾಮಿನೇಷನ್ (shimoga police) ನಡೆಸುತ್ತಲೇ ಬಂದಿದೆ. ಈ ಪೈಕಿ ಒಟ್ಟು 1188 ಏರಿಯಾ ಡ್ಯಾಮಿನೇಷನ್ ನಡೆಸಲಾಗಿದೆ ಎಂದು ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ಕೊಟ್ಟಿದ್ದಾರೆ.
ಈ ವೇಳೆ ವಿಲ್ಹೀಂಗ್, ತ್ರಿಪಲ್ ರೈಡಿಂಗ್, ಸ್ಲೋಗನ್ ಕೂಗುವುದು, ರ್ಯಾಶ್ ಡ್ರೈವಿಂಗ್, ಜನರಿಗೆ ಹೆದರಿಸುವುದು , ಸಲ್ಲದ ಸಮಸಯದಲ್ಲಿ ಅನಗತ್ಯವಾಗಿ ತಿರುಗಾಡುವುದು ಸೇರಿದಂತೆ ಮಿತಿಮೀರಿದ ವರ್ತನೆ ಮಾಡಿದ 9674 ರನ್ನ ಸ್ಟೇಷನ್‌ಗೆ ಕರೆಸಿ, ಆ ಪೈಕಿ ಹಲವರ ವಿರುದ್ಧ ಪಿಟ್ಟಿಕೇಸ್, ಕೊಪ್ಟಾ ಕೇಸ್, ಐಎಂವಿ ಆಕ್ಟ್ ನಡಿ ಕೇಸ್ ಹೀಗೆ ಹಲವು ಕೇಸ್‌ಗಳನ್ನ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Ganeshotsava 2024
ಗಣೇಶೋತ್ಸವದ ಸಿದ್ದತೆ ಹಾಗೂ ಗಾಂಜಾ ಡ್ರೈವ್ (ganja drive ) ಬಗ್ಗೆ ಮಾಹಿತಿ ನೀಡುವ ವೇಳೆ ಈ ವಿವರಣೆಗಳನ್ನ ನೀಡಿದ ಎಸ್‌ಪಿ ಮಿಥುನ್ ಕುಮಾರ್ ರವರು ಡ್ರೋನ್ ಕಣ್ಗಾವಲಿನ ಬಗ್ಗೆ ಮಾಹಿತಿ ನೀಡಿದರು.
ಶಿವಮೊಗ್ಗದಲ್ಲಿ ಡ್ರೋಣ್ ಕಣ್ಣು (shimoga drone)
ಸಾಮಾನ್ಯವಾಗಿ ಏರಿಯಾಗಳಲ್ಲಿ ಹುಡುಗರು ಸೇರುವ ಅಡ್ಡಗಳು ಇರುತ್ತವೆ. ಅಲ್ಲಿ ಪ್ರತಿದಿನ ಸಂಜೆ ಏನೇಲ್ಲಾ ಚಟುವಟಿಕೆಗಳು ನಡೆಯುತ್ತವೆ ಅನ್ನುವುದು ಬಹಳ ಜನರಿಗೆ ಗೊತ್ತಿದೆ. ಅಂತಹ ಅಡ್ಡಗಳ ಮೇಲೆ ಪೊಲೀಸ್ ಇಲಾಖೆ ಡ್ರೋಣ್ ಕಣ್ಣು ನೆಡುತ್ತಿದೆ. ಕಳೆದ ಒಂದು ವಾರದಿಂದ ಈ ಕಣ್ಗಾವಲು ಆರಂಭವಾಗಿದೆ. ಎರಿಯಾಗಳಲ್ಲಿ ಅನಗತ್ಯವಾಗಿ ಗುಂಪು ಸೇರಿ ಪುಂಡಾಟಿಕೆ ನಡೆಸುವವರ ಮೇಲೆ ಅವರಿಗೆ ಗೊತ್ತಿಲ್ಲದಂತೆ ಡ್ರೋಣ್ ಕ್ಯಾಮರಾ ಅವರನ್ನ ಚಿತ್ರೀಕರಿಸಿ ಪೊಲೀಸ್ ಇಲಾಖೆ ರೆಕಾರ್ಡ್ ರೂಮ್‌ಗೆ ಮಾಹಿತಿ ನೀಡುತ್ತದೆ. ಆತಕ್ಷಣವೇ ಪೊಲೀಸರು ಅಂತಹ ಯುವಕರ ವಿರುದ್ಧ ಆಕ್ಷನ್ ತೆಗೆದುಕೊಳ್ಳುತ್ತದೆ.
ಇವತ್ತು ಬಗ್ಗೆ ವಿವರಿಸಿದ ಎಸ್‌ಪಿ ಮಿಥುನ್ ಕುಮಾರ್ ಅನಗತ್ಯ ಸಂದರ್ಭದಲ್ಲಿ ಏರಿಯಾಗಳಲ್ಲಿ ಅನಾವಶ್ಯಕವಾಗಿ ವರ್ತಿಸುವವರ ವಿರುದ್ಧ ಕಣ್ಣಿಡುವ ಸಲುವಾಗಿ, ಅಂತಹ ವ್ಯಕ್ತಿಗಳು ಗುಂಪುಗೂಡುವ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಡ್ರೋಣ್ ಕ್ಯಾಮರಾಗಳನ್ನ ಬಳಸುತ್ತಿದೆ. ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಈ ಕಣ್ಗಾವಲನ್ನ ವಿಶೇಷ ಗಮನವಹಿಸಿ ನಡೆಸಲಾಗುತ್ತಿದೆ ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ