SHIVAMOGGA | MALENADUTODAY NEWS | Sep 5, 2024
ಜಸ್ಟ್ ಮಾತು ಮಾತಿಗೆ ಜಗಳವಾಗಿ, ಮಧ್ಯಪ್ರವೇಶ ಮಾಡಿದ ವ್ಯಕ್ತಿಗೆ ಕೂತ್ಕೋಳ್ಳೋ ಸುಮ್ಮನೆ ಎಂದಿದ್ದಕ್ಕೆ ಗ್ರಾಮಪಂಚಾಯಿತಿಯಲ್ಲಿ ಹೊಡೆದಾಟವಾದ ಘಟನೆಯೊಂದು ಶಿವಮೊಗ್ಗ ತಾಲ್ಲೂಕು ನಲ್ಲಿ ನಡೆದಿದೆ.
ಹಸೂಡಿ ಗ್ರಾಮಪಂಚಾಯ್ತಿಯಲ್ಲಿ ಜೋರು ಫೈಟು
ಶಿವಮೊಗ್ಗ ತಾಲ್ಲೂಕು ಹಸೂಡಿ ಗ್ರಾಮ ಪಂಚಾಯಿತಿಯಲ್ಲಿ ನಿನ್ನೆ ಸಭೆ ನಡೆಯುತ್ತಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಸಭೆ ನಡೆಸ್ತಿದ್ದರು. ಖರ್ಚು ವೆಚ್ಚದ ಲೆಕ್ಕಾಚಾರದ ಬಗ್ಗೆ ಮಾತು ನಡೆಯುತ್ತಿತ್ತು.
ಈ ವೇಳೆ ಸದಸ್ಯರು ಹಾಗೂ ಅಲ್ಲಿದ್ದವರ ಜೊತೆ ಮಾತು ಜೋರಾಗಿದೆ. ಹೀಗೆ ಬೆಳೆದ ಮಾತಿನಿಂದ ಹೊಡೆದಾಟ ಆರಂಭವಾಗಿದ್ದು ಗ್ರಾಮ ಪಂಚಾಯಿತಿ ನೀರುಗಂಟಿ ಹಾಗೂ ಗ್ರಾಮಸ್ತರೊಬ್ಬರ ನಡುವೆ ಹೊಡೆದಾಟವಾಗಿದೆ.
ಪಂಚಾಯಿತಿಯ ಚೇರುಗಳನ್ನೆ ಬಳಸಿ ಇಬ್ಬರು ಹೊಡೆದಿದ್ದಾರೆ. ಇಬ್ಬರ ನಡುವೆಯು ಪರಸ್ಪರ ನಾಲ್ಕೈದು ಏಟುಗಳು ಬಿದ್ದಿದೆ. ಆನಂತರ ಅಲ್ಲಿದ್ದವರು ಜಗಳ ಬಿಡಿಸಿ ಪಂಚಾಯಿತಿಯಿಂದ ಹೊರಕ್ಕೆ ಅವರನ್ನ ಕಳುಸಿದ್ದಾರೆ.
ಇನ್ನೂ ಘಟನೆ ಮುಗಿದ ಬೆನ್ನಲ್ಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಹೊಡೆದಾಟದ ವಿಡಿಯೋ ಜೋರು ವೈರಲ್ ಆಗಿದೆ.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ