SHIVAMOGGA | MALENADUTODAY NEWS | Sep 5, 2024
Ganeshotsva 2024 | ಶಿವಮೊಗ್ಗ ಗಣೇಶನನ್ನ ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ. ಈ ನಡುವೆ ಪೊಲೀಸ್ ಇಲಾಖೆಯು ಸಹ ಶಾಂತಿಯುತವಾಗಿ ಹಬ್ಬಗಳ ಆಚರಣೆಗೆ ಸಿದ್ಧತೆ ಮಾಡಿಕೊಂಡಿದೆ. ಅದರ ಬಗ್ಗೆ ಎಸ್‌ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದು,ವಿವರ ಹೀಗಿದೆ.
ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್
ಶಿವಮೊಗ್ಗದ 2021 ನಂತರ ನಡೆದ ಗಣೇಶೋತ್ಸವ ವಿಡಿಯೋಗಳನ್ನು ಪರಿಶೀಲನೆ ಮಾಡಲಾಗಿದೆ. ಈ ವೇಳೆ ಮೆರವಣಿಗೆ ಸಂದರ್ಭದಲ್ಲಿ ನ್ಯೂಸೆನ್ಸ್ ಹಾಗೂ ವೈಲೆಂಟ್ ಹಾಗೂ ಅಸಭ್ಯವಾಗಿ ನಡೆದುಕೊಂಡವರನ್ನ ಗುರುತಿಸಿ ಅವರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಒಟ್ಟು 106 ಮಂದಿ ವಿರುದ್ದ ಕ್ರಮ ಕೈಗೊಂಡಿದ್ದು ಕೇಸ್ ದಾಖಲಿಸಲಾಗಿದೆ.
ಇದುವರೆಗೂ ಒಟ್ಟು 1999 ಮೀಟಿಂಗ್‌ಗಳನ್ನ ಶಾಂತಿ ಸಭೆಗಳನ್ನ ಮಾಡಲಾಗಿದೆ. ಅವರವರ ಏರಿಯಾಗಳಲ್ಲಿ ಹೋಗಿ ಸಭೆ ನಡೆಸಲಾಗಿದೆ. ಅಧಿಕಾರಿಗಳು ಹಾಗೂ ಖುದ್ದಾಗಿ ಸ್ಥಳೀಯರ ಜೊತೆಗೆ ಮಾತನಾಡಿದ್ದು ಶಾಂತಿಯುತವಾಗಿ ಹಬ್ಬಗಳ ಆಚರಣೆಗೆ ತಿಳಿಸಿದ್ದೇವೆ ಎಂದಿದ್ದಾರೆ
ಈ ವರ್ಷದ ಗಣೇಶೋತ್ಸವದ ಮೇಲೂ ಪೊಲೀಸ್ ಕ್ಯಾಮರಾಗಳು ಕಣ್ಣಿಡಲಿದೆ. ಮಾಮೂಲಿ ಕ್ಯಾಮರಾಗಳ ಜೊತೆಯ್ಲಿ ಡ್ರೋನ್ ಕ್ಯಾಮರಾಗಳು ಮೆರವಣಿಗೆಯ ಮೇಲೆ ನಿಗಾವಹಿಸಲಿದೆ. ರೆಕಾರ್ಡ್ ರೂಮ್‌ನಲ್ಲಿ ವಿಡಿಯೋ ದೃಶ್ಯಗಳನ್ನ ಗಮನಿಸಿ ಸ್ಥಳದಲ್ಲಿಯೇ ಆಕ್ಷನ್ ತೆಗೆದುಕೊಳ್ಳಲಾಗುತ್ತದೆ ಎಂದು ಎಸ್‌ಪಿಯವರು ಮಾಹಿತಿ ನೀಡಿದರು.
ಭದ್ರಾವತಿ 120 ಸಾಗರ 80, ಶಿರಾಳಕೊಪ್ಪ 25 ಸೇರಿದಂತೆ ಹೀಗೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕ್ಯಾಮರಾಗಳನ್ನ ಬಳಸಿಕೊಳ್ಳಲಾಗುತ್ತಿದೆ.
ಗಣಪತಿ ಬಂದೋಬಸ್ತ್ (shivamogga ganesha bandobast)
ಇನ್ನೂ ಶಿವಮೊಗ್ಗದಲ್ಲಿ ಬಂದೋಬಸ್ತ್‌ಗಾಗಿ ನಾಳೆ ಆರ್‌ಎಫ್ ನ ಒಂದು ಕಂಪನಿ ಜಿಲ್ಲೆಗೆ ಬರುತ್ತಿದೆ. ಅಲ್ಲದೆ 1500 ಹೋಮ್ ಗಾರ್ಡ್‌ಗಳನ್ನ ಬಳಸಿಕೊಳ್ಳಲಾಗುತ್ತಿದೆ. 8 ಡಿಆರ್ ತುಕಡಿಗಳು ಕಾರ್ಯಾಚರಣೆಯಲ್ಲಿದೆ. ಒಟ್ಟು 15 KSRP ತುಕಡಿಗಳು ಶಿವಮೊಗ್ಗಕ್ಕೆ ಬರಲಿದೆ. 1500 ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳು ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ ಸ್ವಯಂಸೇವಕರನ್ನ ನಿಯೋಜಿಸಲಾಗುತ್ತಿದೆ ಎಂದ ಎಸ್‌ಪಿ ಮಿಥುನ್ ಕುಮಾರ್ ಮೆರವಣಿಗೆ ಸಂದರ್ಭದಲ್ಲಿ ಇನ್ನಷ್ಟು ಸಿಬ್ಬಂದಿಗಳನ್ನ ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು
ಪ್ಲೆಕ್ಸ್ ಮೇಲೆ ಕಣ್ಣು (shimoga flex)
ಇನ್ನೂ ಶಿವಮೊಗ್ಗದಲ್ಲಿ ಪ್ಲೆಕ್ಸ್‌ಗಳು ಗಲಾಟೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ವಿವಾಧಿತ ಅಥವಾ ಪ್ರಚೋದನಕಾರಿ ಪ್ಲೆಕ್ಸ್‌ಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಈ ಬಗ್ಗೆ ಪ್ಲೆಕ್ಸ್ ತಯಾರಕರಿಗೆ ಎಚ್ಚರಿಕೆ ನೀಡಲಾಗಿದ್ದು, ಸೂಕ್ಷ್ಮ ಪ್ಲೆಕ್ಸ್‌ನ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಪ್ಲೆಕ್ಸ್‌ನಲ್ಲಿ ತಯಾರಕರು ಹಾಗೂ ಅದನ್ನ ಪ್ರಿಂಟ್ ಮಾಡಿಸಿದವರ ಮಾಹಿತಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದ ಅವರು, ಪ್ರಚೋದನಕಾರಿ ಪ್ಲೆಕ್ಸ್‌ಗಳ ವಿರುದ್ಧ ಕೇಸ್ ಗ್ಯಾರಂಟಿ ಎಂದರು.
ರೌಡಿಶೀಟರ್ಸ್ ಕಥೆ (shimoaga rowdyism )
ಇನ್ನೂ ಶಿವಮೊಗ್ಗದಲ್ಲಿ 1300 ರೌಡಿಶೀಟರ್‌ಗಳಿದ್ದು ಅವರಿಗೆ ಈಗಾಗಲೇ ಎಚ್ಚರಿಕೆಯನ್ನ ನೀಡಲಾಗಿದೆ. ಒಟ್ಟು 53 ಮಂದಿಯನ್ನ ಗಡಿಪಾರು ಮಾಡಲಾಗಿದ್ದು, 8 ಮಂದಿಯನ್ನು ಗಣೇಶೋತ್ಸವದ ಹಿನ್ನೆಲೆಯಲ್ಲಿಯೇ ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ