ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 29 2025 : ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿನ ಕುಟ್ರಳ್ಳಿ ಟೋಲ್‌ಗೇಟ್ ವಿರುದ್ಧದ ಹೋರಾಟ ಇದೀಗ ಮತ್ತೊಂದು ಘಟ್ಟ ತಲುಪಿದೆ. ಕುಟ್ರಳ್ಳಿ ಟೋಲ್‌ಗೇಟ್ ಅನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ, ಅಕ್ಟೋಬರ್ 9 ರಂದು ಶಿಕಾರಿಪುರ ಬಂದ್‌ಗೆ ಕರೆ ನೀಡಲಾಗಿದೆ. ಈ ಸಂಬಂದ ಟೋಲ್‌ಗೇಟ್ ಹೋರಾಟ ಸಮಿತಿ ಮುಖಂಡ ಶಿವರಾಜ್ ಬೃಹತ್ ಹೋರಾಟಕ್ಕೆ ಕರೆಕೊಟ್ಟಿದ್ದಾರೆ. ಕಳೆದ ಒಂದು ವರ್ಷದಿಂದಲೂ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಹೋರಾಟವನ್ನು ಮುಂದುವರೆಸಲಾಗಿದ್ದರೂ, ಇಲ್ಲಿಯವರೆಗೆ ಯಾವುದೇ ಸ್ಪಷ್ಟ ಪರಿಹಾರ ದೊರೆತಿಲ್ಲ. ಸಚಿವರು, ಸಂಸದರು ಮತ್ತು ಶಾಸಕರು ಕೂಡ ಟೋಲ್‌ಗೇಟ್ ತೆರವು ಮಾಡುವ ಪರವಾಗಿದ್ದರೂ, ಕಾಣದ ಶಕ್ತಿಯ ಪ್ರಭಾವದಿಂದಾಗಿ ಈ ಬೇಡಿಕೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಂದ್ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಟೋಲ್ ಗೇಟ್ ತೆರವು ಹೋರಾಟಕ್ಕೆ ಈಗಾಗಲೇ ಬಸ್ ಮಾಲೀಕರು, ರೈತ ಸಂಘಟನೆಗಳು ಮತ್ತು ಲಗೇಜ್ ವಾಹನಗಳ ಮಾಲೀಕರು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಪಟ್ಟಣದ ಎಲ್ಲ ವ್ಯಾಪಾರಸ್ಥರು ಮತ್ತು ವರ್ತಕರು ಈ ಪ್ರತಿಭಟನಾ ನಿರ್ಧಾರಕ್ಕೆ ಬೆಂಬಲ ನೀಡಬೇಕೆಂದು ಮುಖಂಡರು ಸಾರ್ವಜನಿಕವಾಗಿ ಮನವಿ ಮಾಡಿಕೊಂಡರು.
ಟೋಲ್ ಎದುರು ಪ್ರತಿಭಟನೆ ನಡೆದ ಸಂದರ್ಭದಲ್ಲಿ ಪ್ರತಿಭಟನಾಕಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವ ಮೂಲಕ ಜಿಲ್ಲಾಡಳಿತವು ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದೆ. ಹೋರಾಟ ಸಮಿತಿಯು ಸಲ್ಲಿಸಿದ ಯಾವುದೇ ಮನವಿಗಳಿಗೆ ಲಿಖಿತ ಭರವಸೆ ದೊರೆತಿಲ್ಲ. ಜಿಲ್ಲಾಡಳಿತ ಕೇವಲ ಕಣ್ಣೊರೆಸುವ ತಂತ್ರವನ್ನು ಅನುಸರಿಸುತ್ತಿದ್ದು, ಈ ಕುರಿತು ಸಾರ್ವಜನಿಕರು ಜಾಗೃತರಾಗಬೇಕು ಎಂದು ಆಗ್ರಹಿಸಿದ್ದಾರೆ.
Shikaripura Bandh on Oct 9 Demand Rises for Kutralli Tollgate Removal
Shikaripura Bandh Malenadu Today, Kutralli Toll Gate location, Shivraj Horta Samiti Shikaripura, ಶಿಕಾರಿಪುರ ಬಂದ್, ಕುಟ್ರಳ್ಳಿ ಟೋಲ್ ಗೇಟ್, ಅಕ್ಟೋಬರ್ 9 ಪ್ರತಿಭಟನೆ, ಟೋಲ್ ತೆರವು ಹೋರಾಟ, ಶಿವಮೊಗ್ಗ ಜಿಲ್ಲಾಧಿಕಾರಿ, ರೈತ ಸಂಘಟನೆ ಬೆಂಬಲ, Shikaripura Bandh, Kutralli Tollgate Protest, Shivamogga DC, Toll Horta Samiti, Farmer Support
ಇದನ್ನು ಸಹ ಓದಿ ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!