SHIVAMOGGA | MALENADUTODAY NEWS | Aug 27, 2024 ಮಲೆನಾಡು ಟುಡೆ
ಶಿವಮೊಗ್ಗದ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದಲ್ಲಿ (Shettihalli Wildlife Sanctuary)ಕಾಡು ಪ್ರಾಣಿಯನ್ನು ಬೇಟೆಯಾಡಿದ ಆರೋಪದ ಮೇರೆಗೆ ನಾಲ್ವರನ್ನ ಬಂಧಿಸಲಾಗಿದೆ. ಅಲ್ಲದೆ ಇವರಿಂದ ಎರಡು ಚುಕ್ಕೆ ಜಿಂಕೆಗಳ (spotted deer)ಶವವನ್ನ ಜಪ್ತು ಮಾಡಲಾಗಿದೆ.
ಸಕ್ರೆಬೈಲು ವನ್ಯಜೀವಿ ವಲಯ ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನ ಬಂಧಿಸಲಾಗಿದೆ.
ಈ ಕಾರ್ಯಾಚರಣೆ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ ಎರಡು ಚುಕ್ಕೆ ಜಿಂಕೆಗಳ ಶವಗಳು, ಚಾಕು, ತಲೆ ಟಾರ್ಚ್ ಮತ್ತು ಪೆಲೆಟ್ ಗಳನ್ನ ಸೀಜ್ ಮಾಡಲಾಗಿದೆ.
Shettihalli Forest shivamogga operation

ನಾಡ ಬಂದೂಕಿನಿಂದ ಜಿಂಕೆಯನ್ನ ಬೇಡೆಯಾಡುತ್ತಿರುವಾಗ ಫಾರೆಸ್ಟ್ ವಾಚರ್‌ಗಳಿಗೆ ಫೈರಿಂಗ್‌ನ ಸೌಂಡ್ ಕೇಳಿಸಿದೆ. ಈ ವೇಳೆ ಅಲರ್ಟ್ ಆಗಿ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ ಪರಿಣಾಮ ಆರೋಪಿಗಳ ತಂಡ ಸೆರೆ ಸಿಕ್ಕಿದೆ ಎನ್ನಲಾಗಿದೆ.
ಇನ್ನಷ್ಟು ಸುದ್ದಿಗಳು
-
Shivamogga court | @ಜೈಲರ್ ಕೊಲೆ ಕೇಸ್ | ಇಬ್ಬರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ , ಮೂವರಿಗೆ ಐದು ವರ್ಷ ಜೈಲು
-
ವೃದ್ಧಾಪ್ಯ ವೇತನದ ದುಡ್ಡು ಕೇಳಿದ್ರೆ ಗೆಟ್ ಔಟ್ , ಹೋಗಿ ಸಾಯಿ ಅಂತಾರಂತೆ | ಅಜ್ಜಿ ಅಳಲನ್ನ ಆಲಿಸುತ್ತಾ ವ್ಯವಸ್ಥೆ?
-
Anandpur Sagar | ಐತಿಹಾಸಿಕ ಪುಷ್ಕರಣಿಯಲ್ಲಿ ಈಜುವಾಗ ಬೆಂಗಳೂರು ಮೂಲದ ಯುವಕ ಸಾವು