ಸಕ್ರೆಬೈಲ್​ ಆನೆ ಬಿಡಾರ ಸದ್ಯದಲ್ಲಿಯೇ ರೀ ಓಪನ್! ಹೇಗಿದೆ ಹೊಸ ರೂಲ್ಸ್! ವಿಶೇಷ ಓದಿ

ಹಂಚಿಕೊಳ್ಳಿ
WhatsApp Facebook X Telegram
Sakrebailu Elephant Camp to Reopen for Tourists from August 15
Karnataka Elephant Camps sakrebailu elephant

Sakrebailu Elephant Camp / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಎಸ್​ಒಪಿ ರಚಿಸುವ ಕಾರಣಕ್ಕೆ ಬಂದ್ ಆಗಿದ್ದ ಶಿವಮೊಗ್ಗ ದ ಸಕ್ರೆಬೈಲ್​ ಆನೆ ಬಿಡಾರ ಸದ್ಯದಲ್ಲಿಯೇ ಮತ್ತೆ ಓಪನ್ ಆಗಲಿದೆ. ಈ ಸಂಬಂಧ ಸ್ಟೇಟ್​ ಪೇಪರ್​ ಒಂದು ಮಾಹಿತಿ ಪ್ರಕಟಿಸಿದ್ದು, ಆ ಮಾಹಿತಿ ಪ್ರಕಾರ, ಇದೇ ಮುಂದಿನ ತಿಂಗಳು ಆಗಸ್ಟ್ 15 ರಿಂದ ಸಕ್ರೆಬೈಲ್ ಆನೆ ಬಿಡಾರ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಮೇ 18ರಂದು ನಡೆದಿದ್ದ ಘಟನೆಯಲ್ಲಿ , ಆನೆಯ ಮೈತೊಳೆಯುವ ಸ್ಥಳದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೆ ಬಿಡಾರಗಳಲ್ಲಿ ಎಸ್​ಒಪಿ ರಚನೆಗೆ ಇಲಾಖೆ ಮುಂದಾಗಿತ್ತು. ಈ ಕಾರಣಕ್ಕೆ ಎಲ್ಲ ಸಾಕಾನೆ ಶಿಬಿರಗಳನ್ನು ಮುಚ್ಚಲಾಗಿತ್ತು.

ಇದೀಗ ಎಸ್​ಒಪಿ ರಚನೆಯಾಗಿದ್ದು, ಹೊಸ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಕ್ರೆಬೈಲು ಕ್ಯಾಂಪ್​ನ್ನ ಸಹ ಸಜ್ಜುಗೊಳಿಸಲಾಗಿದೆಯಂತೆ. ಇನ್ನೂ ಆನೆಗಳನ್ನ ಸ್ನಾನ ಮಾಡಿಸುವ ಜಾಗಕ್ಕೆ ಜನರ ಪ್ರವೇಶ ಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಕ್ಯಾಂಪ್​ನಲ್ಲಿ ರೆಡ್​ ಜೋನ್​ ನಿರ್ಬಂಧಿತ ಪ್ರದೇಶ, ಗ್ರೀನ್​ ಜೋನ್ ಮಾತ್ರ ಜನರಿಗೆ ಮುಕ್ತವಾದ ಏರಿಯಾ ಆಗಿರಲಿದೆ. ಇದಷ್ಟೆ ಅಲ್ಲದೆ ಇನ್ನಷ್ಟು ಕಠಿನ ನಿಯಮಗಳನ್ನ ಜಾರಿಗೆ ತರಲಾಗಿದೆ ಎಂದು ಪತ್ರಿಕೆ ವರದಿಮಾಡಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor