ಸಂತೇಕಡೂರು, ಕಾಚಿನಕಟ್ಟೆ, ಭದ್ರಾವತಿ ಸಿಟಿ ಸೇರಿದಂತೆ ಇವತ್ತು ಹಲವೆಡೆ ಪವರ್ ಕಟ್

ಹಂಚಿಕೊಳ್ಳಿ
WhatsApp Facebook X Telegram
Power Cut Alert Mescom power cut Mescom No Online Services for 2 days  power cut tomorrow shivamogga
Power Cut Alert Mescom power cut power cut tomorrow shivamogga

Santekaduru /ಮಲೆನಾಡು ಟುಡೆ/ ಶಿವಮೊಗ್ಗ/ ಮೆಸ್ಕಾಂ ಶಿವಮೊಗ್ಗ, ಈ ದಿನ ಗ್ರಾಮಾಂತರ ಭಾಗಗಳಲ್ಲಿ ಕರೆಂಟ್ ಇರಲ್ಲ ಎಂದು ಪ್ರಕಟಣೆ ನೀಡಿದೆ. ಮೆಸ್ಕಾಂ ನೀಡಿದ ಪ್ರಕಟಣೆಯ ಪ್ರಕಾರವಾಗಿ, ಇಂದು ಸಂತೇಕಡೂರು ವ್ಯಾಪ್ತಿ ಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇವತ್ತು ಅಂದರೆ, ಜೂನ್​ 12 ರಂದು ಬೆಳಗ್ಗೆ 10ರಿಂದ ಸಂಜೆ 6ಗಂಟೆವರೆಗೆ ಈ ಕೆಳಕಂಡ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಂತೇಕಡೂರು ಸುತ್ತಮುತ್ತ ಕರೆಂಟ್ ಇರಲ್ಲ /Santekaduru

ಸಂತೇಕಡೂರು, ಶ್ರೀರಾಮ ನಗರ, ರಾಂಪುರ, ಕೊರಲಹಳ್ಳಿ, ಕಾಚಿನಕಟ್ಟೆ, ಜ್ಯೋತಿನಗರ, ದೊಡ್ಡಬೀಳು,ವಿನಾಯಕನಗರ, ಲಕ್ಕಿನಕೊಪ್ಪ ತೋಟದಕೆರೆ, ಹುರಳಿಹಳ್ಳಿ, ಗಣೆದಾಳು, ಉಂಬ್ಳೆಬೈಲು, ಕಣಗಲಸರ, ಮರಾಠಿ ಕ್ಯಾಂಪ್, ಸಾಲಿಗೆರೆ, ಕೈದೊಟ್ಟು, ಸಿದ್ದಮಾಜಿ ಹೊಸೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

ಭದ್ರಾವತಿಯಲ್ಲಿಯು ಕರೆಂಟ್​ ಇರಲ್ಲ

ವಿದ್ಯುತ್ ಮಾರ್ಗ ನಿರ್ವಹಣೆ ಮತ್ತು ಮರಗಳ ರೆಂಬೆ ತೆರವು ಕಾಮಗಾರಿ ಹಿನ್ನೆಲೆಯಲ್ಲಿ ಜೂ.12ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ನ್ಯೂಟೌನ್, ನ್ಯೂಕಾಲೊನಿ, ಹುಡ್ಕೊ ಕಾಲೊನಿ, ಹೊಸ ಬುಳ್ಳಾಪುರ, ಆಂಜನೇಯ ಆಗ್ರಹಾರ, ಕೂಲಿಬ್ಲಾಕ್ ಶೆಡ್, ಗಣೇಶ ಕಾಲೊನಿ, ಜನ್ನಾಪುರ, ಎಸ್.ಜೆ.ರಸ್ತೆ, ಎನ್‌ಟಿಬಿ ಕಚೇರಿ ಭಾಗ, ಕಮರ್ಷಿಯಲ್ ರಸ್ತೆ, ಕಿತ್ತೂರು ಚೆನ್ನಮ್ಮ ಬಡಾವಣೆ, ರಾಜಪ್ಪ ಬಡಾವಣೆ, ಹಾಲಪ್ಪ ಬಡಾವಣೆ, ಜಿಂಕ್ ಲೈನ್, ಫಿಲ್ಟರ್ ಶೆಡ್ ಸುತ್ತಮುತ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor