ಶಿವಮೊಗ್ಗ : 200 ರೂಪಾಯಿ ಲಾಭಕ್ಕೆ ಆಸೆಪಟ್ಟು 7 ಲಕ್ಷ ಕಳೆದುಕೊಂಡ ವ್ಯಕ್ತಿ: ಏನಿದು ಘಟನೆ 

prathapa thirthahalli
Prathapa thirthahalli - content producer

Money Transfer Fraud :ಶಿವಮೊಗ್ಗ: ಕೇವಲ 200 ರೂಪಾಯಿ ಲಾಭಾಂಶದ ಆಸೆಗೆ ಬಿದ್ದ ಶಿವಮೊಗ್ಗದ ವ್ಯಕ್ತಿಯೊಬ್ಬರು, ಇನ್‌ಸ್ಟಾಗ್ರಾಮ್‌ನಲ್ಲಿ ಬಂದ ಜಾಹೀರಾತನ್ನು ನಂಬಿ 7 ಲಕ್ಷ ರೂಪಾಯಿಗಿಂತಲೂ ಅಧಿಕ ಹಣವನ್ನು ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. 

ಶಿವಮೊಗ್ಗದ ಸೋಮಿನಕೊಪ್ಪದ ನಿವಾಸಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಗ್ರಾಮ್ ನೋಡುತ್ತಿದ್ದಾಗ, ಅವರಿಗೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸುವ ಜಾಹೀರಾತೊಂದು ಕಾಣಿಸಿದೆ. ವಂಚಕರು ಈ ಜಾಹೀರಾತಿನ ಮೂಲಕ  ದೂರುದಾರರನ್ನು ಸುಲಭವಾಗಿ ನಂಬಿಸಿ, ಹಣ ಹೂಡಿಕೆ ಮಾಡಿದರೆ ದೊಡ್ಡ ಪ್ರಮಾಣದ ಲಾಭ ಗಳಿಸಬಹುದು ಎಂದು ಭರವಸೆ ನೀಡಿದ್ದರು.ಇದನ್ನು ನಂಬಿದ ದೂರುದಾರರು, ಮೊದಲು 20,000 ಹಣವನ್ನು ವಂಚಕರಿಗೆ ವರ್ಗಾಯಿಸಿದ್ದಾರೆ. ಆನಂತರ, ಆ ವಂಚಕರು ಮೊದಲ 60 ದಿನಗಳ ಕಾಲ ಪ್ರತಿದಿನ ಆ ವ್ಯಕ್ತಿಗೆ 200 ರಂತೆ ಲಾಭಾಂಶದ ಹಣವನ್ನು ಕಳುಹಿಸುವ ಮೂಲಕ ದೂರುದಾರರ ವಿಶ್ವಾಸವನ್ನು ಗಳಿಸಿದ್ದಾರೆ.

- Advertisement -

ಪ್ರತಿದಿನ ಬರುತ್ತಿದ್ದ ಈ ಸಣ್ಣ ಲಾಭಾಂಶದಿಂದ  ಸಂತೋಷಗೊಂಡ ದೂರುದಾರರು, ಇನ್ನೂ ಹೆಚ್ಚಿನ ಲಾಭ ಗಳಿಸಬೇಕು ಎಂಬ ಉದ್ದೇಶದಿಂದ ಹಂತ ಹಂತವಾಗಿ ಒಟ್ಟು 7,84,400 ಲಕ್ಷ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ, ಈ ದೊಡ್ಡ ಮೊತ್ತವನ್ನು ವರ್ಗಾಯಿಸಿದ ನಂತರ, ವಂಚಕರಿಂದ ಯಾವುದೇ ಹಣವಾಗಲಿ ಅಥವಾ ಪ್ರತಿಕ್ರಿಯೆಯಾಗಲಿ ಬರಲಿಲ್ಲ. ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದ ತಕ್ಷಣ, ಆ ವ್ಯಕ್ತಿ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Money Transfer Fraud

Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *