ಮಲೆನಾಡುಟುಡೆ ನ್ಯೂಸ್, ಶಿವಮೊಗ್ಗ, ಆಗಸ್ಟ್ 29 2025 : ಹವಾಮಾನ ಇಲಾಖೆಯ ವರದಿ ಪ್ರಕಾರ, ಇವತ್ತು ಕೂಡ ಮಳೆ ಮುಂದುವರಿಯಲಿದೆ. ನಿನ್ನೆ ಬಿಡುಗಡೆಯಾಗಿರುವ ಹವಾಮಾನ ಇಲಾಖೆಯ ಬುಲೆಟಿನ್ ಪ್ರಕಾರ ಗಮನಿಸುವುದಾದರೆ, ಕರಾವಳಿ ಕರ್ನಾಟಕದಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು ಮಲೆನಾಡಿನಲ್ಲಿಯು ವರ್ಷಧಾರೆಯ ಅಬ್ಬರ ತಾಪಮಾನ ಕುಸಿಯುವಂತೆ ಮಾಡಿದೆ.

ಇನ್ನೂ ಈ ದಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ತೀವ್ರ ಹೈ ಅಲರ್ಟ್ ಘೋಷಿಸಲಾಗಿದೆ. ಕೆಲವಡೆ ರೆಡ್ ಅಲರ್ಟ್ ಹಾಗೂ ಆರೆಂಜ್ ಅಲರ್ಟ್ ನೀಡಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಸೇರಿದಂತೆ ಬೀದರ್, ಕಲಬುರಗಿ, ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Malnad Weather Alert August 29