kumsi murder case ಜೂನ್​ 30 : ಕುಂಸಿ ಕೊಲೆ ಪ್ರಕರಣ ಎಸ್​ಪಿ ಹೇಳಿದ್ದೇನು

prathapa thirthahalli
Prathapa thirthahalli - content producer

kumsi murder case : ಕುಂಸಿ ಕೊಲೆ ಪ್ರಕರಣ ಎಸ್​ಪಿ ಹೇಳಿದ್ದೇನು

kumsi murder case :  ಶಿವಮೊಗ್ಗ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 32 ವರ್ಷದ ಯುವಕ ವಾಸು ಎಂಬುವವರ ಕೊಲೆ ಪ್ರಕರಣ ಹಾಗೂ ಸೊರಬದಲ್ಲಿ ಗರ್ಭಿಣಿ ಮಹಿಳೆಯ ಮೇಲೆ ನಡೆದ ಕೊಲೆ ಯತ್ನ ಪ್ರಕರಣಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕುಂಸಿ ಪಟ್ಟಣದಲ್ಲಿ ನಿನ್ನೆ ಭಾನುವಾರ ರಾತ್ರಿ 9:30ರ ಸುಮಾರಿಗೆ ವಾಸು ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆ ಆರೋಪಿಗಳ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದ್ದು, ಅವರನ್ನ ಪತ್ತೆ ಮಾಡುವ ಸಲುವಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಇನ್ನೂ ಕೊಲೆಗೆ ಕಾರಣವಾದ ಅಂಶಗಳ ಬಗ್ಗೆ ಪ್ರಶ್ನಿಸಿದ್ದಾಗ  ತನಿಖೆ ಪೂರ್ಣಗೊಂಡ ನಂತರ ಹೆಚ್ಚಿನ ವಿವರಗಳನ್ನು ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಇದೇ ವೇಳೆ, ಸೊರಬದಲ್ಲಿ ಗರ್ಭಿಣಿಯನ್ನು ಕೊಲೆಗೆ ಯತ್ನಿಸಿದ ಪ್ರಕರಣದ ಬಗ್ಗೆ ಮಾಹಿತಿ ಹಂಚಿಕೊಂಡ ಎಸ್​ಪಿ  ಮದುವೆಯಾಗದೆ ಗರ್ಭಿಣಿಯಾದ ಕಾರಣ, ಆಕೆಯ ತಂದೆಯೇ ಮಗಳನ್ನು ಕೊಲೆ ಮಾಡಲು ಯತ್ನಿಸಿದ್ದರು.. ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ, ಕಾಡಿನ ಪ್ರದೇಶದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ಯುವತಿ ಮೂರ್ಚೆ ಹೋಗಿದ್ದಳು, ಬಳಿಕ ಆಕೆಗೆ ಪ್ರಜ್ಞೆ  ಬಂದ ಬಳಿಕ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆಯ ಹೇಳಿಕೆ ಆಧರಿಸಿ ಎಫ್​ಐಆರ್​ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

Share This Article