ಧರ್ಮಸ್ಥಳಕ್ಕೆ ಗಂಗೆ-ತುಂಗೆ ಜಲದೊಂದಿಗೆ ಪ್ರಯಾಣ ನಡೆಸಲಿದ್ದಾರೆ ಕೆ.ಇ. ಕಾಂತೇಶ್, ಕಾರಣವೇನು

prathapa thirthahalli
Prathapa thirthahalli - content producer

k.e kanthesh ಶಿವಮೊಗ್ಗ: ‘ಬುರುಡೆ ಗ್ಯಾಂಗ್’‌ನಿಂದ ಧರ್ಮಸ್ಥಳಕ್ಕೆ ಕಳಂಕ ಬಂದಿದೆ, ಹಾಗಾಗಿ ಅದನ್ನು ಶುದ್ಧೀಕರಿಸುವ ಉದ್ದೇಶದಿಂದ ಸೆಪ್ಟೆಂಬರ್ 2ರಂದು ಗಂಗಾ ಮತ್ತು ತುಂಗಾ ನದಿಗಳ ನೀರನ್ನು ತೆಗೆದುಕೊಂಡು ಧರ್ಮಸ್ಥಳಕ್ಕೆ ತೆರಳುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಹೇಳಿದ್ದಾರೆ.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಬುರುಡೆ ಗ್ಯಾಂಗ್ ಸುಳ್ಳು ಹೇಳುವ ಮೂಲಕ ಧರ್ಮಸ್ಥಳದ ಘನತೆಗೆ ಧಕ್ಕೆ ತಂದಿದೆ. ಆದ್ದರಿಂದ, ಆ ಪವಿತ್ರ ಸ್ಥಳವನ್ನು ಶುದ್ಧೀಕರಿಸಲು ಸೆಪ್ಟೆಂಬರ್ 2ರಂದು ಬೆಳಿಗ್ಗೆ 8 ಗಂಟೆಗೆ ತಮ್ಮ ಮನೆಯಿಂದ ನೂರಾರು ವಾಹನಗಳಲ್ಲಿ ಪ್ರಯಾಣ ಬೆಳೆಸುವುದಾಗಿ ಕಾಂತೇಶ್ ತಿಳಿಸಿದರು. 

- Advertisement -

ಈ ಯಾತ್ರೆಯಲ್ಲಿ ಗಂಗಾ ಮತ್ತು ತುಂಗಾ ನದಿಗಳ ನೀರನ್ನು ತೆಗೆದುಕೊಂಡು ಹೋಗಲಿದ್ದೇವೆ. ಧರ್ಮಸ್ಥಳಕ್ಕೆ ತಲುಪಿದ ನಂತರ, ಅಲ್ಲಿನ ವೃಂದದವರ ಸಹಕಾರದೊಂದಿಗೆ ಬೀದಿ ಬೀದಿಗಳಲ್ಲಿ ಈ ಪವಿತ್ರ ನೀರನ್ನು ಸಿಂಪಡಿಸುವ ಮೂಲಕ ಶುದ್ಧೀಕರಣ ಕಾರ್ಯ ನಡೆಸಲಾಗುವುದು ಎಂದು ಅವರು ಹೇಳಿದರು.

k.e kanthesh

TAGGED:
Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *