ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025: ಎಐ ಟೈಂನಲ್ಲಿ ಯಾವಾಗ ಯಾವ ಕಾರಣಕ್ಕೆ ಕೇಸ್ ಬೀಳುತ್ತೆ ಎನ್ನುವುದೆ ಗೊತ್ತಾಗಲ್ಲ. ಅದರಲ್ಲಿಯು ರಿಲೇಷನ್ ಶಿಪ್ ಅಂತಾ ಮಾಡಿಬಿಟ್ಟರೆ ಕಥೆ ಪಡ್ಚಾ ಅಂತಾ ಭಯ ಬೀಳುವ ಮಟ್ಟಿಗೆ ಪುರುಷರು ಸಂತ್ರಸ್ತರಾಗ್ತಿದ್ದಾರೆ.ಇದರ ನಡುವೆ ರಾಜ್ಯ ಹೈಕೋರ್ಟ್ ಒಂದು ವಿಶಿಷ್ಟ ತೀರ್ಪು ನೀಡಿದೆ. ಅಲ್ಲದೆ ಪ್ರಕರಣವೊಂದರಲ್ಲಿ ಆರೋಪಿತನ ಮೇಲಿದ್ದ ರೇಪ್ ಚಾರ್ಜ್ರ್ಸ್ನ್ನ ತೆಗೆದುಹಾಕಿದೆ. ಹೈಕೋರ್ಟ್ ನೀಡಿದ ಈ ತೀರ್ಪು ಸಾಕಷ್ಟು ಚರ್ಚೆಯ ಜೊತೆಜೊತೆಗೆ ಕೆಲವೊಂದು ಕಾನೂನಾತ್ಮಕ ಉಲ್ಲಂಘನೆಗಳಿಗೂ ಬ್ರೇಕ್ ಹಾಕುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೇಲೆ ಶೂ ಎಸೆದ ವಕೀಲನ ಬಂಧನಕ್ಕೆ ಎನ್.ಎಸ್.ಯು.ಐ ಆಗ್ರಹ
ಹೈಕೋರ್ಟ್ ತೀರ್ಪಿನ ಪ್ರಮುಖ ಸಾರಾಂಶ ಅಂದರೆ, ಪರಸ್ಪರ ಒಪ್ಪಿಗೆಯ (Mutual Volition) ಮೇರೆಗೆ ಆರಂಭವಾದ ಸಂಬಂಧವು, ಅಂತಿಮವಾಗಿ ಫೇಲ್ ಆಗಿ ಬ್ರೇಕಪ್ ಆದರೂ , ಅತ್ಯಂತ ಸ್ಪಷ್ಟ ಪ್ರಕರಣಗಳನ್ನು ಹೊರತುಪಡಿಸಿ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಅಪರಾಧವಾಗಿ ಪರಿವರ್ತಿಸಲು ಸಾಧ್ಯವಿಲ್ಲ ಅಂತಾ ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ.
ಕಡಿಮೆಯಾಗ್ತಿದ್ಯಾ ಅಡಕೆ ರೇಟು!? ಕೃಷ್ಟಿ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಿಕೆ ದರ!
ಏನಿದು ಪ್ರಕರಣ/Justice M Nagaprasanna
ಬೆಂಗಳೂರಿನ 23 ವರ್ಷದ ಯುವಕನ ಕೇಸ್. ಆತನ ವಿರುದ್ಧ ಅತ್ಯಾಚಾರದ ಆರೋಪಗಳನ್ನು (Rape Charges) ಹೊರಿಸಲಾಗಿತ್ತು. ಅರ್ಜಿದಾರ ಯುವಕ ಮತ್ತು ದೂರುದಾರ ಮಹಿಳೆ ಡೇಟಿಂಗ್ ಅಪ್ಲಿಕೇಶನ್ ಮೂಲಕ ಒಂದು ವರ್ಷಕ್ಕೂ ಹೆಚ್ಚು ಕಾಲ ಪರಿಚಿತರಾಗಿದ್ದರು. ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕ ಬೆಳೆಸಿ, ಬಳಿಕ ವೈಯಕ್ತಿಕವಾಗಿ ಮೀಟ್ ಆಗಿದ್ದರು. ಈ ವೇಳೆ ಇಬ್ಬರು ಒಟ್ಟಿಗೆ ಕಾಲ ಕಳೆದಿದ್ದರು.

ಅಡಿಕೆ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಕೆ ದರ! ಯಾವ ಊರಲ್ಲಿ ಕನಿಷ್ಠ,ಗರಿಷ್ಠ ದರ ಎಷ್ಟಿದೆ ಓದಿ
ಆನಂತರ ಯುವತಿ,ಯುವಕನ ವಿರುದ್ಧ ಬಿಎನ್‌ಎಸ್ (BNS) ಕಾಯಿದೆಯ ಸೆಕ್ಷನ್ 64ರ ಅಡಿಯಲ್ಲಿ ಕಂಪ್ಲೆಂಟ್ ದಾಖಲಿಸಿದ್ದಳು. ಪೊಲೀಸರು ಸಹ ಈ ಕೇಸ್ ನಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಯುವಕ ಹೈಕೋರ್ಟ್ ಮೆಟ್ಟಿಲೇರಿದ್ದ. ಈ ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತೋಟಕ್ಕೆ ನುಗ್ಗಿ ಅಡಿಕೆ ಗೊನೆ ಕದ್ದ ಕಳ್ಳರು
ವಿಚಾರಣೆ ವೇಳೆ ಯುವಕ, ಯುವತಿಯ ಜೊತೆ ಷೇರ್ ಮಾಡಿಕೊಂಡಿದ್ದ ಫೋಟೋಸ್, ಮೆಸೇಜ್, ಇತ್ಯಾದಿ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಿ, ತನಿಖೆಯ ವೇಳೆ ಇದ್ಯಾವುದನ್ನು ಪರಿಗಣಿಸಿಲ್ಲ. ಆರೋಪಪಟ್ಟಿಯ ಭಾಗವಾಗಿಸಿಲ್ಲ ಎಂದು ದೂರಿದ್ದ.
ಇನ್ನೊಂದೆಡೆ, Additional State Public Prosecutor, ಪ್ರಕರಣದಲ್ಲಿ ಆರೋಪಿತ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮದುವೆಯ ಸುಳ್ಳು ಭರವಸೆಯನ್ನು ನೀಡಿ ಲೈಂಗಿಕ ಸಂಪರ್ಕವೆಸಗಿದಂತಹ ಪ್ರಕರಣದಲ್ಲಿ ಬಿಎನ್‌ಎಸ್‌ನಲ್ಲಿ ಶಿಕ್ಷೆ ನೀಡಲು ಅವಕಾಶವಿದೆ.
ಇದು ಮದುವೆಯ ಭರವಸೆ ನೀಡಿದಂತಹ ಪ್ರಕರಣವಲ್ಲದಿದ್ದರೂ ಸಹ, ಈ ಕೃತ್ಯ ಸಮ್ಮತಿಯಿಂದ ನಡೆದಿತ್ತೋ ಇಲ್ಲವೋ ಎಂಬುದು ವಿಚಾರಣೆಯ ವಿಷಯವಾಗಿದೆ. ಹಾಗಾಗಿ, ಅರ್ಜಿದಾರರು ಪೂರ್ಣ ಪ್ರಮಾಣದ ವಿಚಾರಣೆಗೆ ಒಳಪಡಬೇಕು ಅಂತಾ ವಾದಿಸಿದ್ರು.
ಎಲ್ಲಿಯ ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ತೆಲಂಗಾಣ! ಸಿಂಪಲ್ ಆಗಿ ₹4 ಲಕ್ಷ ಹೊಡೆದ ಆಸಾಮಿ! ನಂಬಿಕೆಯ ಕ್ರೈಂ ಇದು
ಅಂತಿಮವಾಗಿ ಜಸ್ಟೀಸ್ ನಾಗಪ್ರಸನ್ನರವರು ಅರ್ಜಿದಾರ ಯುವಕ ಮತ್ತು ದೂರುದಾರರ ನಡುವಿನ ಮೆಸೆಜ್ಗಳನ್ನು ಗಮನಿಸಿದಾಗ ಅವರ ಕೃತ್ಯಗಳು ಪರಸ್ಪರ ಸಮ್ಮತಿಯಿಂದ ನಡೆದಿವೆ ಎಂದು ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಸಮ್ಮತಿಯ ದೈಹಿಕ ಸಂಪರ್ಕ ಮತ್ತು ಅತ್ಯಾಚಾರದಂತಹ ಗಂಭೀರ ಆರೋಪಗಳ ನಡುವಿನ ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪುಗಳಲ್ಲಿ ಸೂಕ್ಷ್ಮವಾಗಿ ವಿವರಿಸಿದೆ ಎಂಬುದನ್ನ ಉಲ್ಲೇಖಿಸುತ್ತಾ ನ್ಯಾಯಮೂರ್ತಿ ನಾಗಪ್ರಸನ್ನ, ಪರಸ್ಪರ ಒಪ್ಪಿಗೆಯಿಂದ ಹುಟ್ಟಿದ ಸಂಬಂಧವು, ಅಂತಿಮವಾಗಿ ನಿರಾಸೆಯಲ್ಲಿ ಅಂತ್ಯಗೊಂಡು ವಿಫಲವಾದರೂ, ಅತ್ಯಂತ ಸ್ಪಷ್ಟವಾದ ಪ್ರಕರಣಗಳಲ್ಲಿ ಹೊರತುಪಡಿಸಿ, ಅದನ್ನು ಕ್ರಿಮಿನಲ್ ಅಪರಾಧವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ.
Justice M Nagaprasanna
ಈ ಪ್ರಸ್ತುತ ಮೊಕದ್ದಮೆಯನ್ನು ಒಂದು ವಿಚಾರಣೆಯ ಹಾದಿಯಲ್ಲಿ ಮುಂದುವರೆಯಲು ಅವಕಾಶ ನೀಡಿದರೆ, ಕಾನೂನಿನ ಪ್ರಕ್ರಿಯೆಯ ದುರ್ಬಳಕೆಯೂ ಆಗುತ್ತದೆ ಎಂದು ಹೇಳುವ ಮೂಲಕ ಅರ್ಜಿದಾರರ ವಿರುದ್ಧದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ರದ್ದುಗೊಳಿಸಿದರು.

ಹೆದರಿ ಓಡಿದ್ದಾತನ ಬೆನ್ನಟ್ಟಿದ್ದ ಖಾಕಿ ಸಿಕ್ತು ಭರ್ಜರಿ ಬೇಟೆ! ಸಾಗರ,ಸೊರಬ, ಕಾರ್ಗಲ್ ದೇಗುಲದಲ್ಲಿ ಕಳ್ಳತನದ ರಹಸ್ಯ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Justice M Nagaprasanna quashed a rape case against a 23-year-old, ruling that a consensual relationship ending in disappointment cannot be prosecuted as an offence under BNS Section 64.Karnataka High Court
