ನೀವು ಡಿಗ್ರಿ ಹೋಲ್ಡರ್ಸಾ! ಪದವೀಧರರ ಕ್ಷೇತ್ರದ ವೋಟರ್​ ಲಿಸ್ಟ್​ನಲ್ಲಿ ಹೆಸರು ಸೇರಿಸಿ! ಇಲ್ಲಿದೆ ಮಾಹಿತಿ

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 5  2025:  ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕು ಅನ್ನುವಂತಿದ್ದರೇ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.  ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು (Voters’ List) ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. (Election Commission)  

ಈ ಸಂಬಂಧ 2022ರ ನವೆಂಬರ್ 1 ಕ್ಕಿಂತ ಮೊದಲು ಪದವಿ (Degree) ಪೂರ್ಣಗೊಳಿಸಿದ ಅರ್ಹ ಪದವೀಧರರು (Eligible Graduates) ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.

- Advertisement -

ಅರ್ಜಿ ಸಲ್ಲಿಸಲು ನವೆಂಬರ್ 6, 2025 ಕೊನೆಯ ದಿನಾಂಕವಾಗಿದೆ. ಅರ್ಜಿದಾರರು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ಅರ್ಹತಾ ಮಾನದಂಡ /Graduate Voter

  1. ಅರ್ಜಿದಾರರು ನವೆಂಬರ್ 1, 2025 ಕ್ಕೆ ಕನಿಷ್ಠ 3 ವರ್ಷಗಳ ಮೊದಲು ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. 
  2. ಮೂರು ವರ್ಷಗಳ ಡಿಪ್ಲೋಮಾ (Diploma) ವ್ಯಾಸಂಗ ಮಾಡಿದವರೂ ಸಹ ಈ ಅವಕಾಶವನ್ನು ಬಳಸಿಕೊಳ್ಳಬಹುದು. 
  3. ಅರ್ಜಿಯನ್ನು ಚುನಾವಣಾ ಆಯೋಗ ನಿಗದಿಗೊಳಿಸಿದ ನಮೂನೆ 18 (Form 18) ರಲ್ಲಿ ಭರ್ತಿ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಬೇಕು.
  4. ಎಲ್ಲಾ ದಾಖಲೆಗಳ ನಕಲು ಪ್ರತಿಗಳಿಗೆ ಗೆಜೆಟೆಡ್ ಅಧಿಕಾರಿಗಳಿಂದ (Gazetted Officer) ದೃಢೀಕರಣ ಮತ್ತು ಅರ್ಜಿದಾರರ ಸ್ವಯಂ ದೃಢೀಕರಣ ಕಡ್ಡಾಯವಾಗಿದೆ.

ಬೇಕಿರುವ ದಾಖಲೆ /Graduate Voter

  • ಆಧಾರ್ ಕಾರ್ಡ್ (Aadhar Card) ನ ನಕಲು ಪ್ರತಿ.
  • ಮತದಾರರ ಗುರುತಿನ ಚೀಟಿ (Voter ID / E.P.I.C) ನ ನಕಲು ಪ್ರತಿ.
  • ಎಸ್.ಎಸ್.ಎಲ್.ಸಿ (SSLC) ಅಂಕಪಟ್ಟಿಯ ನಕಲು ಪ್ರತಿ.
  • ಪದವಿ ಪ್ರಮಾಣ ಪತ್ರ (Degree Certificate) ಅಥವಾ ಮೂರು ವರ್ಷಗಳ ಪದವಿ ಅಂಕಪಟ್ಟಿಗಳ (Marks Card) ನಕಲು ಪ್ರತಿ. 
  • ಡಿಪ್ಲೋಮಾ ಪದವೀಧರರು ಮೂರು ವರ್ಷಗಳ ಡಿಪ್ಲೋಮಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
  • ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (Photograph) (4.5 C.m x 3.5 C.m, ಬಿಳಿ ಹಿನ್ನೆಲೆ, ಸಹಿ ಮಾಡಿರಬಾರದು, ಪೂರ್ಣ ಮುಖ ಕಾಣುವಂತಿರಬೇಕು).
  • ಸರ್ಕಾರಿ ನೌಕರರಾಗಿದ್ದರೆ, ನಿಗದಿತ ನಮೂನೆಗೆ ಕಚೇರಿ ಮುಖ್ಯಸ್ಥರ ಸಹಿ ಮತ್ತು ಗೆಜೆಟೆಡ್ ಅಧಿಕಾರಿಯ ಸಹಿ ಮಾಡಿಸಬೇಕು.
  • ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಚೇರಿ (Taluk Office) ಅಥವಾ ತಾಲೂಕು ಕಚೇರಿಯ ಚುನಾವಣಾ ಶಾಖೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.
Graduate Voter Malenadu today e paper Malenadu today e paper Flights from Goa Chennai Diverted to Hyderabad Malenadu today e paper : 20-08-2025Malnad suddi Shimoga malenadu shivamogga e paper news today e paper today
Malenadu today e paper Malenadu today e paper  e paper 07 today Graduate Voter

Graduate Voter Registration 2025 Eligibility & Last Date

ಇದನ್ನು ಸಹ ಓದಿ :  ಸಿನಿಮಾ ಟಿಕೆಟ್​ ಎಸೆಯದಿರಿ ದುಡ್ಡು ವಾಪಸ್​ ಬರಬಹುದು, ಇ-ಪೇಪರ್​ ಓದಿ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *