Devil movie update : ಡೆವಿಲ್ ಚಿತ್ರದಿಂದ ಬಂತು ಹೊಸ ಅಪ್ಡೇಟ್ : ಹಾಡಿನ ಟೈಟಲ್ ಕೇಳಿ ಥ್ರಿಲ್ ಆದ ಅಭಿಮಾನಿಗಳು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರೀಕರಣವನ್ನು ಮುಗಿಸಿದೆ. ಇದರ ನಡುವೆ ಚಿತ್ರತಂಡ ಒಂದರ ಮೇಲೊಂದು ಅಪ್ಡೇಟ್ ನೀಡುತ್ತಿದ್ದು, ಇದೀಗ ಡೆವಿಲ್ ಚಿತ್ರತಂಡದಿಂದ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ.
ಹೌದು ಡೆವಿಲ್ ಚಿತ್ರತಂಡ ಇದೀಗ ಹೊಸ ಹಾಡೊಂದನ್ನು ಆಗಸ್ಟ್ 15 ರಂದು ರಿಲೀಸ್ ಮಾಡಲು ಹೊರಟಿದ್ದು, ಅದರ ಹೆಸರು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದಕ್ಕೆ ಕಾರಣವೆಂದರೆ ಈ ಹಿಂದೆ ದರ್ಶನ್ ಹೇಳಿದ್ದ ಹಾಗೂ ಹೆಚ್ಚು ವೈರಲ್ ಆಗಿದ್ದ ಇದ್ರೆ ನೆಮ್ದಿಯಾಗ್ ಇರ್ಬೇಕು ಎಂಬ ಮಾತನ್ನೇ ಹಾಡಿನ ಟೈಟಲ್ ಆಗಿ ಇಡಲಾಗಿದೆ. ಕೆಲವರು ಈ ಹಾಡಿನ ಟೈಟಲ್ ಕೇಳಿದಾಗ ಆಶ್ಚರ್ಯದಿಂದ ಇದು ಫ್ಯಾನ್ ಮೇಡ್ ಸಾಂಗ್ ಎಂದುಕೊಂಡಿದ್ದೂ ಇದೆ.
ಈ ಹಾಡು ಆಗಸ್ಟ್ 15 ರಂದು ಬೆಳಿಗ್ಗೆ 10;05 ಕ್ಕೆ ಸರಿಗಮಪ ಯೂಟ್ಯೂಬ್ ಚಾನಲ್ನಲ್ಲಿ ರಿಲೀಸ್ ಆಗಲಿದ್ದು, ಇದಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಆದರೆ ಹಾಡನ್ನು ಯಾರು ಹಾಡಲಿದ್ದಾರೆ. ಹಾಗೂ ಯಾರ ಸಾಹಿತ್ಯವಿದೆ ಎಂದು ಚಿತ್ರತಂಡ ಮಾಹಿತಿ ನೀಡಿಲ್ಲ.
ಎಲ್ಲ ಅಂದುಕೊಂಡಂತೆ ಆಗಿದ್ದರೆ 2024 ರ ಡಿಸೆಂಬರ್ನಲ್ಲಿಯೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರೀಕರಣ ಸ್ವಲ್ಪ ವಿಳಂಬವಾಗಿತ್ತು. ಇದೀಗ ಚಿತ್ರತಂಡ ಚಿತ್ರೀಕರಣ ಹಾಗೂ ಡಬ್ಬಿಂಗ್ ಕಾರ್ಯವನ್ನು ಮುಗಿಸಿ ರಿಲೀಸ್ಗೆ ರೆಡಿಯಾಗಿದೆ.
ಹಾಡಿನ ಬಿಡುಗಡೆಯ ನಂತರ, ಚಿತ್ರತಂಡ ಮುಂಬರುವ ಗಣೇಶ ಹಬ್ಬದಂದು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆಯೇ ಎಂದು ಕಾದು ನೋಡಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
View this post on Instagram
