SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ
ಶಿವಮೊಗ್ಗ ಜೈಲಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ತೂಗುದೀಪರವರ ತಂಡ ಇಬ್ಬರನ್ನ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಅಂದುಕೊಂಡಂತೆ ಆದರೆ ಇವತ್ತು ರಾತ್ರಿಯೊಳಗೆ ಆರೋಪಿಗಳಿಬ್ಬರು ಶಿಫ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿರುವ ದೃಶ್ಯಗಳು ಹೊರಬಿದ್ದ ಬೆನ್ನಲ್ಲೆ ಎಲ್ಲಾ ಆರೋಪಿಗಳನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಈ ಸಂಬಂಧ ಬೆಂಗಳೂರು 24ನೇ ಎಸಿಎಂಎಂ ನ್ಯಾಯಾಲಯ ಮಂಗಳವಾರ ಅನುಮತಿ ನೀಡಿದೆ ಎನ್ನಲಾಗಿದೆ.


ಆರೋಪಿಗಳಾದ ಜಗದೀಶ್ ಎ6, ಹಾಗೂ ಲಕ್ಷ್ಮಣ್ ಎ12 ಆರೋಪಿಗಳು ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ.
6ನೇ ಆರೋಪಿ ಜಗದೀಶ್ ಅಲಿಯಾಸ್ ಜಗ್ಗ, ಆಟೋ ಚಾಲಕನಾಗಿದ್ದು, ಈತನ ಮೇಲೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದ ಆರೋಪವಿದೆ. ಈತನ ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದರು ಎಂದು ದೂರಲಾಗಿದೆ.
ಇನ್ನೂ 12ನೇ ಆರೋಪಿ ಲಕ್ಷ್ಮಣ್ ನಟ ದರ್ಶನ್ ಅವರ ಕಾರು ಚಾಲಕನಾಗಿದ್ದಾನೆ. ಕೃತ್ಯ ನಡೆದ ಸಂದರ್ಭದಲ್ಲಿ ಈತ ಸ್ಪಾಟ್‌ನಲ್ಲಿ ಮೃತದೇಹ ಸ್ಥಳಾಂತಿರಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಎನ್ನುವ ಆರೋಪವಿದೆ.
ಇನ್ನಷ್ಟು ಸುದ್ದಿಗಳು
Shivamogga | 30 ಸಾವಿರ ಕ್ಯೂಸೆಕ್ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ
ಶಿವಮೊಗ್ಗ-ಶಿರಾಳಕೊಪ್ಪ ಟೋಲ್ ಗೇಟ್ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?
Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ | ನಾಲ್ವರು ಅರೆಸ್ಟ್
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ