Shivamogga | ಹಬ್ಬಕ್ಕೂ ಮೊದಲೇ ಜೈಲಿಗೆ ಬಂದ ಗಣಪತಿ | ಸೆಂಟ್ರಲ್‌ ಜೈಲ್‌ನಲ್ಲಿ ಇವತ್ತು ನಡೆಯಿತು 3 ಘಟನೆ

Shivamogga jail Ganapati story | ಶಿವಮೊಗ್ಗ ಕೇಂದ್ರ ಕಾರಾಗೃಹ ವಸತಿ ನಿಲಯದ ಆವರಣದಲ್ಲಿ ಜೈಲು ಮಹಾಗಣಪತಿ ದೇವಾಸ್ಥಾನ ಉದ್ಘಾಟನೆಗೊಳ್ಳುತ್ತಿದೆ. ಗಣಪತಿಯ ಪ್ರಾಣ ಪ್ರತಿಷ್ಟಾಪನೆ ನಡೆಯುತ್ತಿದೆ

Shivamogga  | ಹಬ್ಬಕ್ಕೂ ಮೊದಲೇ ಜೈಲಿಗೆ ಬಂದ ಗಣಪತಿ | ಸೆಂಟ್ರಲ್‌ ಜೈಲ್‌ನಲ್ಲಿ  ಇವತ್ತು ನಡೆಯಿತು 3 ಘಟನೆ

SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ  

ಇನ್ನೇನು ಗಣೇಶೋತ್ಸವ 2024 (Ganeshotsav 2024) ಹತ್ತಿರ ಬರುತ್ತಿದೆ. ಇದೇ ಸೆಪ್ಟೆಂಬರ್‌ ಏಳರಂದು ಗಣಪತಿ ಹಬ್ಬ ಆಚರಣೆ ನಡೆಯಲಿದೆ. ಈಗಾಗಲೇ ಮಲೆನಾಡು ಗಣೇಶನ ಹಬ್ಬಕ್ಕಾಗಿ ಸಜ್ಜುಗೊಳ್ಳುತ್ತಿದ್ದು, ವಿಶೇಷವಾಗಿ ಶಿವಮೊಗ್ಗದಲ್ಲಿ ಗಣಪತಿ ಮಂಡಳಿಗಳು ವಿಜ್ರಂಭಣೆಯ ಆಚರಣೆಗೆ ಸಿದ್ದವಾಗುತ್ತಿವೆ. 




ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ




ವಿಶೇಷ ಅಂದರೆ, ಈ ಸಲ ಹಬ್ಬಕ್ಕೂ ಮೊದಲೇ ಗಣೇಶ ಶಿವಮೊಗ್ಗ ಸೆಂಟ್ರಲ್‌ ಜೈಲು ಸೇರಿದ್ದಾನೆ. ಹಾ ದಯವಿಟ್ಟು ತಪ್ಪು ತಿಳಿಯಬೇಡಿ, ವಿಘ್ನ ನಿವಾರಕನಾಗಿ ಗಣಪತಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಪ್ರತಿಷ್ಟಾಪನೆ ಗೊಳ್ಳುತ್ತಿದ್ದಾನೆ. 

ಶಿವಮೊಗ್ಗ ಕೇಂದ್ರ ಕಾರಾಗೃಹ

ಹೌದು, ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ನಿರ್ಮಾಣವಾಗಿರುವ ನೂತನ ದೇವಾಲಯದಲ್ಲಿ ಗಣೇಶನ ಪ್ರತಿಷ್ಟಾಪನೆ ನಡೆಯುತ್ತಿದೆ ಕೇಂದ್ರ ಕಾರಾಗೃಹ ವಸತಿ ಗೃಹ ಆವರಣ ಜೈಲು ಮಹಾ ಗಣಪತಿ ದೇವಸ್ಥಾನ ಸೇವಾ ಸಮಿತಿ ಜೈಲು ಗಣಪನಿಗಾಗಿ ನೂತನವಾದ ದೇಗುಲವೊಂದನ್ನ ನಿರ್ಮಿಸಿದೆ. ಕಳೆದ ಕೆಲವು ವರ್ಷಗಳಿಂದ ಈ ದೇವಾಲಯ ನಿರ್ಮಾಣದ ಹಂತದಲ್ಲಿದ್ದು, ಇದೀಗ ಪೂರ್ಣಗೊಂಡಿದೆ. 

ದೇವಾಲಯದ ಉದ್ಘಾಟನೆಯ ಜೊತೆಯಲ್ಲಿ ಜೈಲು ಮಹಾಗಣಪತಿಯ ಪ್ರತಿಷ್ಟಾಪನೆಯು ಇವತ್ತು ನಡೆಯಲಿದೆ. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ ಅನಿತಾ ಆರ್‌ ರವರ ನೇತೃತ್ವದಲ್ಲಿ ದೇವಾಲಯ ಉದ್ಘಾಟನೆಗೊಳ್ಳಲಿದ್ದು, ಗಣಪತಿಯ ಪ್ರಾಣ ಪ್ರತಿಷ್ಟಾಪನೆ ನಡೆಯಲಿದೆ. 




ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಕೇಂದ್ರ ಕಾರಾಗೃಹದ ಮುಖ್ಯದ್ವಾರ ದಾಟಿ ತುಸು ಮುಂದಕ್ಕೆ ಸಾಗಿದರೆ ಬಲಬದಿಗೆ ದೇವಾಲಯ ನಿರ್ಮಾಣವಾಗಿದೆ. ಈ ಜೈಲಿನ ಗಣಪತಿ ದೇವಾಲಯದ ಹಿಂದೆ ಹಲವು ಕಥೆಗಳು ಇಲ್ಲಿವೆ. ಅದರಾಚೆಗೆ ಈ ಹಿಂದೆ ಹಳೆಯ ಜೈಲಿನ ಆವರಣದಲ್ಲಿಯು ದೇವಾಸ್ಥಾನವೊಂದಿತ್ತು. ಆ ದೇವಾಲಯದಲ್ಲಿ ಇವತ್ತಿಗೂ ಪೂಜೆ ನಡೆಯುತ್ತಿವೆ. ಆದರೆ ಸೋಗಾನೆಯಲ್ಲಿ ನಿರ್ಮಾಣವಾದ ಜೈಲಿನ ಆವರಣದಲ್ಲಿ ದೇವಸ್ಥಾನವೊಂದು ನಿರ್ಮಾಣವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ದೇಗುಲ ನಿರ್ಮಾಣದ ಪ್ರಸ್ತಾಪಗಳು ಚರ್ಚೆಯಾದವು. ಆ ಬಳಿಕ ವಿಘ್ನ ನಿವಾರಕನೇ ಕಾರಾಗೃಹದ ಆವರಣದಲ್ಲಿ ನೆಲಸಲಿ ಎಂದು ತೀರ್ಮಾನವಾಯ್ತು. ಕಾರಾಗೃಹದ ಸಿಬ್ಬಂದಿಗಳೆಲ್ಲರೂ ಒಟ್ಟಾಗಿ ಶ್ರಮಿಸಿದ ಫಲವಾಗಿ ಇವತ್ತು ಗಣಪನ ದೇವಾಲಯ ಕಾರಾಗೃಹದ ವಸತಿ ಗೃಹದ ಆವರಣದಲ್ಲಿ ನಿರ್ಮಾಣವಾಗಿದೆ. 

ಒಂದೇ ದಿನ ನಡೆಯಿತು 3 ಘಟನೆ

ಇವತ್ತು ಶಿವಮೊಗ್ಗ ಕೇಂದ್ರ ಕಾರಾಗೃಹ ಸುದ್ದಿಯಲ್ಲಿದೆ. ಒಂದು ಕಡೆ ದರ್ಶನ್‌ ಪಡೆಯ ಇಬ್ಬರು ಇಲ್ಲಿಗೆ ಶಿಫ್ಟ್‌ ಆಗುತ್ತಿದ್ದಾರೆ. ಇನ್ನೊಂದು ಕಡೆ ಈ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜೈಲಿನ ಮೇಲೆ ಶಿವಮೊಗ್ಗ ಪೊಲೀಸರು ರೇಡ್‌ ನಡೆಸಿದ್ದಾರೆ. ಇದೇ ಹೊತ್ತಿಗೆ ಗಣೇಶನ ಪ್ರತಿಷ್ಟಾಪನೆ ನಡೆಯುತ್ತಿದೆ.ಇವೆಲ್ಲವೂ ಒಂದೆ ಸಮಯದಲ್ಲಿ ನಡೆಯುತ್ತಿರುವುದು ಕಾಕತಾಳೀಯವಷ್ಟೆ..

ಇನ್ನಷ್ಟು ಸುದ್ದಿಗಳು

Shivamogga | 30 ಸಾವಿರ ಕ್ಯೂಸೆಕ್‌ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ



ಶಿವಮೊಗ್ಗ-ಶಿರಾಳಕೊಪ್ಪ ಟೋಲ್‌ ಗೇಟ್‌ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?



Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ |‌ ನಾಲ್ವರು ಅರೆಸ್ಟ್



ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ