ತುಂಗಾ ಡ್ಯಾಮ್​ನ 21 ಗೇಟ್ ಓಪನ್! ಲಿಂಗನಮಕ್ಕಿ ಜಲಾಶಯದಿಂದಲೂ ನೀರು ಬಿಡುಗಡೆ?

ajjimane ganesh

 Dam water realese in shimogga  ಶಿವಮೊಗ್ಗ, malenadu today news : August 18 2025: ಶಿವಮೊಗ್ಗದಲ್ಲಿ ಇವತ್ತು ಸಹ ಮಳೆ ಮುಂದುವರಿದಿದೆ. ಮಳೆ ಆರ್ಭಟದ ನಡುವೆ ಶಿವಮೊಗ್ಗದ ಮತ್ತೊಂದು ಪ್ರಮುಖ ಜಲಾಶಯ ಲಿಂಗನಮಕ್ಕಿ ಡ್ಯಾಮ್ ಭರ್ತಿಯಾಗುವ ಹಂತಕ್ಕೆ ಬಂದಿದೆ. ಹಾಗಾಗಿ ನಾಳೇ ಲಿಂಗನಮಕ್ಕಿ ಡ್ಯಾಮ್​ನಿಂದ ನೀರು ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಸಂಬಂಧ ಜಲಾನಯನ ಪ್ರದೇಶಗಳಲ್ಲಿ ವಾಹನದ ಮೂಲಕ ಮೈಕ್ ಮೂಲಕ ಅನೌನ್ಸ್​ಮೆಂಟ್ ಮಾಡಲಾಗುತ್ತಿದೆ. 

malnad rain and dam levels linganamakki dam level today linganamakki dam Water Level Today Report
linganamakki dam Water Level Today Report

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1815.05 ಅಡಿಗಳಿಗೆ ತಲುಪಿದ್ದು, ಪ್ರಸ್ತುತ  59,800 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಾಗಾಗಿ ನೀರನ್ನು ರೇಡಿಯಲ್ ಗೇಟ್​ಗಳ ಮೂಲಕ ಹೊರಕ್ಕೆ ಬಿಡಲು ನಿರ್ಧರಿಸಲಾಗಿದೆ. 

- Advertisement -

ಇತ್ತ  ತುಂಗಾ ಜಲಾಶಯದಿಂದ 21 ಕ್ರಸ್ಟ್ ಗೇಟ್‌ಗಳನ್ನು ಓಪನ್ ಮಾಡಲಾಗಿದ್ದು ಬರೊಬ್ಬರಿ 72,000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮಳೆ ಮುಂದುವರಿದರೆ, ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಿಂದಿನ ವರ್ಷಗಳಲ್ಲಿ 80 ಸಾವಿರ ಕ್ಯೂಸೆಕ್​ಗೂ ಅಧಿಕ ನೀರು ಬಿಡುಗಡೆಯಾದಾಗ, ಶಿವಮೊಗ್ಗದಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ ಉದಾಹರಣೆಗಳಿವೆ.. 

sharavathi valley Dam water realese in shimogga
sharavathi valley ಲಿಂಗನಮಕ್ಕಿ ಡ್ಯಾಂ

 ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

Dam water realese in shimogga

Share This Article
Leave a Comment

Leave a Reply

Your email address will not be published. Required fields are marked *