SHIVAMOGGA NEWS TODAY

ಆರ್​.ಎಂ.ಸಿ. ಯಾರ್ಡ್​ ಬಳಿ ಪೊಲೀಸರ ದಾಳಿ: ಮಹೀಂದ್ರಾ XUV ಕಾರು ಸೇರಿದಂತೆ ₹6 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ವಶ. ಆಗಿದ್ದೇನು ? 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ನಗರದ ಆರ್​.ಎಂ.ಸಿ. ಯಾರ್ಡ್​ ಬಳಿ ಕಾರಿನಲ್ಲಿ ಕುಳಿತು ಕ್ರಿಕೆಟ್​ ಬೆಟ್ಟಿಂಗ್​​ ಆಡುತ್ತಿದ್ದ ಐವರು ಆರೋಪಿಗಳನ್ನು ವಿನೋಬಾನಗರ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಈ ಪ್ರದೇಶಗಳಲ್ಲಿ ಈ ದಿನ ಕರೆಂಟ್​ ಇರಲ್ಲ

ಘಟನೆಯ ವಿವರ

ಬಂಧಿತ ಐವರು ಆರೋಪಿಗಳು ನಗರದ ಆರ್​.ಎಂ.ಸಿ. ಯಾರ್ಡ್​ ಬಳಿ ಕಾರಿನಲ್ಲಿ ಕ್ರಿಕ್​ ಲೈನ್​ ಗುರು ಎಂಬ ಬೆಟ್ಟಿಂಗ್​​ ಆ್ಯಪ್​​ ಮೂಲಕ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು. ಈ ಬಗ್ಗೆ ಲಭ್ಯವಾದ ಖಚಿತ ಮಾಹಿತಿಯ ಆಧಾರದ ಮೇಲೆ ವಿನೋಬಾನಗರ ಪೊಲೀಸರು ಸ್ಥಳದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ಈ ಕಾರ್ಯಾಚರಣೆಯ ವೇಳೆ ಪೊಲೀಸರು ಆರೋಪಿಗಳಿಂದ 35,000 ನಗದು, 7 ಮೊಬೈಲ್ ಫೋನ್‌ಗಳು ಹಾಗೂ ಒಂದು ಮಹೀಂದ್ರಾ XUV 300 ಕಾರು ಸೇರಿದಂತೆ ಒಟ್ಟು 6.35 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಐದೂ ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Cricket Betting Racket Busted in Shivamogga

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.