Chatpat news 01 . ಸಂಬಳ ನೀಡದ ಮಾಲಿಕ, ಲಾರಿಯನ್ನು ಮನೆಗೆ ಕೊಂಡೊಯ್ದ ಚಾಲಕ
ಆನಂದಪುರ ಠಾಣಾ ವ್ಯಾಪ್ತಿಯಲ್ಲಿ ಲಾರಿ ಚಾಲಕನಿಗೆ ಮಾಲೀಕ ಸಂಬಳ ನೀಡದಿರುವ ಕಾರಣಕ್ಕೆ ಚಾಲಕ ಲಾರಿಯನ್ನು ತನ್ನ ಮನೆ ಕೊಂಡೊಯ್ದಿದ್ದಾನೆ. ಈ ಹಿನ್ನೆಲೆ ಲಾರಿ ಮಾಲೀಕ 112ಗೆ ಕರೆ ಮಾಡಿ ದೂರು ನೀಡಿದ್ದಾರೆ. ಸ್ಥಳಕ್ಕೆ ERV ಸಿಬ್ಬಂದಿ ಭೇಟಿ ನೀಡಿದಾಗ ಚಾಲಕ ಸ್ಥಳಳದಲ್ಲಿ ಇರದ ಕಾರಣ ಪೊಲೀಸರು ಚಾಲಕನಿಗೆ ಕರೆ ಮಾಡಿ ಕೂಡಲೇ ಠಾಣೆಗೆ ಬಂದು ವಿವರಣೆ ನೀಡುವಂತೆ ತಿಳಿಸಿದ್ದಾರೆ.
2 . ಬಸ್ ನಿಲ್ದಾಣದಲ್ಲಿ ವ್ಯಕ್ತಿ ಸಾವು
ನ್ಯೂಟೌನ್ ಠಾಣಾ ವ್ಯಾಪ್ತಿಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಈ ಕುರಿತು 112ಕ್ಕೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ERV ಸಿಬ್ಬಂದಿ ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಜೊತೆಗೆ ಮೃತ ವ್ಯಕ್ತಿಯ ಸಂಬಂಧಿಕರು ಮತ್ತು ಸಂಬಂಧಪಟ್ಟ ವಿಷಯವನ್ನು ತಿಳಿಸಿದ್ದಾರೆ
Chatpat news 03 ಮೀಟರ್ ರೀಡಿಂಗ್ ವೇಳೆ ಮೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ;
ಜಯನಗರ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರ ಮೀಟರ್ ರೀಡಿಂಗ್ ಮಾಡುತ್ತಿದ್ದ ಮೆಸ್ಕಾಂ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಗಲಾಟೆ ನಡೆಸಿರುವ ಬಗ್ಗೆ 112ಕ್ಕೆ ದೂರು ದಾಖಲಾಗಿದೆ. ಸ್ಥಳಕ್ಕೆ ERV ಸಿಬ್ಬಂದಿ ತೆರಳಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಆದ್ದರಿಂದ ದೂರುದಾರರಾದ ಮೆಸ್ಕಾಂ ಸಿಬ್ಬಂದಿಗೆ ಸಂಬಂಧಪಟ್ಟ ಠಾಣೆಗೆ ತೆರಳಿ ದೂರು ದಾಖಲಿಸುವಂತೆ ಸಿಬ್ಬಂದಿ ತಿಳಿಸಿದ್ದಾರೆ.