ಸಂಸದ ರಾಘವೇಂದ್ರರಿಗೆ ಹೊಸ ಜವಾಬ್ದಾರಿ ಕೊಟ್ಟ ಬಿಎಸ್​ವೈ! ಮಾಜಿ ಸಿಎಂ ಪ್ಲಾನ್ ಏನು ಓದಿ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 24, 2023 GOOGLE NEWS


ಶಿವಮೊಗ್ಗಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ (shivamogga assembly constituency) ಚನ್ನಬಸಪ್ಪರಿಗೆ ಬಿಎಸ್​ ಯಡಿಯೂರಪ್ಪನವರ ಬೆಂಬಲ ಲಭಿಸಿದೆ. ಶಿವಮೊಗ್ಗಕ್ಕೆ ಬರುತ್ತಲೇ ಲಿಂಗಾಯತ ಸಮಾಜದ ಸಭೆ ನಡೆಸಿದ ಮಾಜಿ ಸಿಎಂ, ಅಭ್ಯರ್ಥಿ ಚನ್ನಬಸಪ್ಪ ಅಲ್ಲ ನಾನೇ ಅಭ್ಯರ್ಥಿ ಎಂದು ಪಕ್ಷದ ಕ್ಯಾಂಡಿಡೇಟ್​ನ್ನ ಗೆಲ್ಲಿಸಿಕೊಡಿ ಎಂದು ಕರೆಕೊಟ್ಟಿದ್ದಾರೆ. 

50 ಸಾವಿರ ಮತಗಳ ಅಂತರದಲ್ಲಿ ವಿಜಯೇಂದ್ರರ ಗೆಲುವು

ತಮ್ಮ ವಿನೋಬನಗರ ನಿವಾಸದಲ್ಲಿ ಕರೆದಿದ್ದ ಲಿಂಗಾಯತ ಮುಖಂಡ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ  ಶಿಕಾರಿಪುರ ಕ್ಷೇತ್ರದಲ್ಲಿ ವಿಜಯೇಂದ್ರ ಸುಲಭವಾಗಿ 50 ಸಾವಿರ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ. 

ಬಿವೈ ರಾಘವೇಂದ್ರರಿಗೆ ಜಿಲ್ಲೆಯ ಹೊಣೆ

ಇನ್ನೂ ಇದೇ ವೇಳೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪರವರು,  ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಜಿಲ್ಲೆಯ ಇತರ ಕ್ಷೇತ್ರದ ಕಡೆ ಹೆಚ್ಚು ಗಮನ ನೀಡುವಂತೆ ಸೂಚಿಸಿದ್ದೇನೆ ಎಂದಿದ್ದಾರೆ. 

ಚುನಾವಣೆಗೆ ಇರುವುದು  ಕೇವಲ 15 ದಿನ ಮಾತ್ರ, ಹೀಗಾಗಿ  ಪ್ರತಿಬೂತ್ ನಲ್ಲಿ ಕೆಲಸವಾಗಬೇಕು.  ಪ್ರತಿಯೊಬ್ಬರು 10 ಜನರ ಮನವೊಲಿಸಿ ಬಿಜೆಪಿಗೆ ಮತ ಹಾಕಿಸಿ ಕರೆಕೊಟ್ಟರು. 

 

Malenadutoday.com Social media

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor