Breaking Unveiling Shivamogga Shocking Crime 10 Shivamogga news / ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ಇವತ್ತಿನ ಚಟ್ಪಟ್ ನ್ಯೂಸ್ ಇಲ್ಲಿದೆ./
ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕಡೆ ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ಲಕ್ಷಾಂತರ ರೂಪಾಯಿ ಸೈಬರ್ ವಂಚನೆ ನಡೆದಿದ್ದರೆ, ಮತ್ತೊಂದೆಡೆ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರ ಬರ್ಬರ ಹತ್ಯೆ ನಡೆದಿದ್ದು ಪ್ರಕರಣ ಸಂಬಂಧ ಮೂವರನ್ನ ಬಂಧಿಸಲಾಗಿದೆ. ಇದಲ್ಲದೆ, ಅಕ್ರಮ ಮರದ ನಾಟೆ ಸಾಗಾಟ ಪ್ರಕರಣವೊಂದು ವರದಿಯಾಗಿದೆ.

1. ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ 34 ಲಕ್ಷ ರೂ. ಸೈಬರ್ ವಂಚನೆ! Breaking Unveiling Shivamogga Shocking Crime 10
ಶಿವಮೊಗ್ಗದಲ್ಲಿ ಸೈಬರ್ ಆನ್‌ಲೈನ್ ವಂಚನೆ ಮುಂದುವರಿಯುತ್ತಲೇ ಇದೆ. ಇದಕ್ಕೆ ಇನ್ನೊಂದು ಉದಾಹರಣೆ ಸೇರಿಕೊಂಡಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂಬ ವಾಟ್ಸಾಪ್ ಸಂದೇಶ ನಂಬಿ ವ್ಯಕ್ತಿಯೊಬ್ಬರು 34.16 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಬಿ.ಬಿ. ಸ್ಟ್ರೀಟ್ನ ನಿವಾಸಿಯೊಬ್ಬರು ತಮ್ಮ

ವಾಟ್ಸಾಪ್‌ಗೆ ಬಂದ ಸಂದೇಶವನ್ನ ನಂಬಿ, ಅದರ ಲಿಂಕ್ಗಳಿಗೆ ಕನೆಕ್ಟ್ ಆಗಿದ್ದಾರೆ. ಆ ಬಳಿಕ ಅವರು ಹೇಳಿದಂಥೆ ಸೈಬರ್ ವಂಚಕರ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿದ್ದಾರೆ. ಬಳಿಕ ಮೋಸ ಹೋಗಿದ್ದು ಗೊತ್ತಾಗಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
2.ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಬರ್ಬರ ಹತ್ಯೆ: 3 ಜನರ ಬಂಧನ!
ಇತ್ತ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದ್ದ ಮಹಿಳೆ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮೂವರನ್ನ ಅರೆಸ್ಟ್ ಮಾಡಿದ್ದಾರೆ. ದೆವ್ವ ಬಿಡಿಸುವ ನೆಪದಲ್ಲಿ ಗೀತಮ್ಮ (45) ಎಂಬ ಮಹಿಳೆಯನ್ನು ಅಮಾನುಷವಾಗಿ ಥಳಿಸಿ ಅವರ ಸಾವಿಗೆ ಕಾರಣವಾದವರ ವಿರುದ್ಧ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಇಲ್ಲಿನ ಗ್ರಾಮದ ಆಶಾ (35) ಎಂಬಾಕೆ ತನ್ನ ಮೇಲೆ ಗ್ರಾಮದೇವತೆ ಚೌಡೇಶ್ವರಿ ಬಂದಿದ್ದಾಳೆ ಎಂದು ನಂಬಿಸಿ, ದೆವ್ವ ಮೈಮೇಲೆ ಬರುತ್ತದೆ ಎಂದು ತನ್ನ ತಾಯಿ ಗೀತಮ್ಮನನ್ನ ಈಕೆಯ ಬಳಿಗೆ ಕರೆತಂದಿದ್ದ ಸಂಜಯ್ ಜೊತೆಗೆ ಸೇರಿ, ಗೀತಮ್ಮರ ಮೇಲೆ ನಾಲ್ಕು ಗಂಟೆಗೂ ಅಧಿಕ ಕಾಲ ಈಕೆ ಹಲ್ಲೆ ನಡೆಸಿದ್ದಳು. ಇದರಿಂದ ನೋವು ತಾಳಲಾರದೇ ಆಕೆ ಸಾವನ್ನಪ್ಪಿದ್ದಳು. ಇದೀಗ ಪ್ರಕರಣ ಸಂಬಂಧ ಹಲ್ಲೆ ನಡೆಸಿದ ಆಶಾ, ಆಕೆಯ ಪತಿ ಸಂತೋಷಕುಮಾರ್ (37) ಮತ್ತು ಮೃತ ಮಹಿಳೆಯ ಪುತ್ರ ಸಂಜಯ್ (20) ಅವರನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
3.ತೀರ್ಥಹಳ್ಳಿಯಲ್ಲಿ ಅಕ್ರಮ ಮರದ ನಾಟ ವಶ
ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ವಲಯಾರಣ್ಯ ವ್ಯಾಪ್ತಿಯಲ್ಲಿ ಬರುವ ಹಳಗ ಗ್ರಾಮದಲ್ಲಿ 150 ಅಡಿಗೂ ಹೆಚ್ಚು ಹೊನ್ನೆ ಮರದ ನಾಟದ ಸಾಮಗ್ರಿಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.ಸದ್ಯ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದ್ದು, ಅರಣ್ಯ ಇಲಾಖೆ ಈ ಪ್ರಕರಣದ ಕುರಿತು ತನಿಖೆ ಮುಂದುವರಿಸಿದೆ.
Breaking: Unveiling Shivamogga’s Shocking Crime Spree – What You Need to Know! #ShivamoggaCrime #CyberFraud #StockMarketScam #SuperstitionKills #ForestCrime #KarnatakaNews #PoliceInvestigation #AdikeScam #TimberMafia #Holehonnur #Thirthahalli #JusticeForGeetamma
Shivamogga crime, cyber fraud, stock market scam, WhatsApp scam, murder, superstition, exorcism, Holehonnur, Jambaragatte, forest crime, illegal timber, Thirthahalli, Honne wood, Karnataka crime news, police arrest, CEN police, SP Mithun Kumar